STORYMIRROR

Surabhi Latha

Tragedy Classics Inspirational

4  

Surabhi Latha

Tragedy Classics Inspirational

ನಿರೀಕ್ಷೆ

ನಿರೀಕ್ಷೆ

1 min
445

ಹತ್ತಾರು ಕನಸುಗಳು ಅರಳುವ ಸಮಯ 

ನನಸಾದ ನೆನಪಂತೂ ಇಂದಿಗೂ ಇಲ್ಲ 

ಮುಂದಡಿಯಿಡುತ ಸಾಗಿ ಅರ್ಧ ದಾರಿ ಸವಿಯಿತು 

ಬಿಚ್ಚಿಟ್ಟ ಆಸೆಗಳನ್ನು ಮತ್ತೆ ಗಂಟು ಕಟ್ಟಿಡಲಾಯಿತು 

ಅದೇನೋ ಕೆಲವರ ಹುಟ್ಟೇ ಹಾಗೆ ಅನಿಸಿತು 

ಕೈಗೆ ತಾಕುವಂತಿದ್ದರೂ ಕೈಗೆ ಸಿಗದೆ ನಿರಾಸೆಗೊಳಿಸುವುದು 


ಅನ್ಯರ ನೋಡಿದಾಗ ಹೊಟ್ಟೆ ಉರಿಯು ಬರದು 

ಬದಲಾಗಿ ಜಿಗುಪ್ಸೆಯ ನಗೆಯೊಂದು ತುಟಿಯ ಸವರಿ ಹೋಗುತ್ತದೆ.

ಏನೂ ಕಷ್ಟ ಪಡದೇ ಒಲಿವ ಅದೃಷ್ಟ 

ಕೆಲವರಿಗೆ ತಪಸ್ಸು ಮಾಡಿದರೂ ಒಲಿಯದು 

ನಂಬಿಕೆಯ ನಡುವಲ್ಲೇ ನಡಿಗೆ ನಿಂತು ಹೋಗಿರುತ್ತದೆ 

ಇದಕ್ಕಾಗಿ ಯಾರನ್ನು ದೂರುವ ಹಾಗೂ ಇಲ್ಲ. 


ಕಾಲಯ್ ತಸ್ಮೈ ನಮಃ ಅನ್ನುವರು ಆದರೆ ಕಾಲವೇ 

ನಿಲ್ಲದೆ ಓಡುತಿರಲು,ಓಡುವ ಗಡಿಯಾರ ನೋಡುವುದೊಂದೇ 

ನಮಗುಳಿಯುವ ಪಾಲು,ಹೆಜ್ಜೆ ಗಳು ನಿಲ್ಲದೆ ಸಾಗುತ್ತಿದೆಯಾದರೂ ಗುರಿ ಮಾತ್ರ ಅಂತರದಲ್ಲೇ ಇದೆ 

ಮುಟ್ಟುವ ಪ್ರಯತ್ನಕ್ಕಂತೂ ಅಂತ್ಯವೇ ಕಾಣದು 

ಹರಿವ ನದಿಯು ಹರಿಯುತಿರಲಿ ಎಂದಿನಂತೆ 


ನಿರಾಸೆ ಜಿಗುಪ್ಸೆಗಳ ನಡುವೆಯೂ ಹೊಸತನವನ್ನು 

ಬರಮಾಡಿಕೊಳ್ಳುವ ಮನಸ್ಸು ಎಲ್ಲರದಾಗಿರಲಿ 



Rate this content
Log in

Similar kannada poem from Tragedy