ವಾಸ್ತವ
ವಾಸ್ತವ
ಮನ್ನಿಸಲು ನಾ ಯಾರು
ನೀ ಮಾಡಿದ ತಪ್ಪಾದರೂ ಏನು?
ತಪ್ಪು ಇಬ್ಬರದೂ ಅಲ್ಲ...
ಪರಿಸ್ಥಿತಿಗಳ ಕೈಗೊಂಬೆ ನಾವು
ಸಂತಸ ಪಡಲು ಅಂತಹ ಖುಷಿ ಏನಿಲ್ಲ
ದುಃಖಿಸುತ್ತಾ ಕೂರಲು ಅಂತಹ ನೋವೇನಿಲ್ಲ..
ಜೀವನವ ನಿರ್ಧರಿಸುವ ಘಟ್ಟವಿದು
ಎಚ್ಚರ ತಪ್ಪಿದಲ್ಲಿ ದಾರಿಯೇ ಕಾಣದು..
ಜಾರಿ ಬಿದ್ದಲ್ಲಿ ಎತ್ತಲು ಯಾರೂ ಬರರು..
ಮಾಡುವ ಕೆಲಸದಲ್ಲೂ ತೃಪ್ತಿ ಇಲ್ಲ
ದುಡ್ಡಿನ ಹಿಂದೆಯೇ ಓಡುತ್ತಿದೆ ಎಲ್ಲಾ
ಮನದಲ್ಲಿ ನೆಮ್ಮದಿ ಇಲ್ಲ..
ತಾಳ್ಮೆಯಂತು ಇಲ್ಲವೇ ಇಲ್ಲ..!
ನನ್ನ ನಿರೀಕ್ಷೆಗಳು ಬರೀ
ನಿರೀಕ್ಷೆಗಳಾಗಿವೆ..
ಅಪ್ಪನ ಮನಸ್ಸು ಅರ್ಥವಾಗುತ್ತಿಲ್ಲ
ಅಮ್ಮನ ಕೊರಗು ನಿಂತಿಲ್ಲ..
ಸುಂದರ ಬದುಕಿನ ಆಲೋಚನೆಯಲ್ಲಿ
ನಾಳಿನ ದಿನಗಳ ಎಣಿಕೆಯಲ್ಲಿ
ಕಳೆಯಬೇಕಿದೆ ಕಾಲ..
ಈಡೇರದ ಕನಸುಗಳ ನಂಬಿಕೆಯಲ್ಲಿ...
