ಬರಬಾರದೇ ನನಗಾಗಿ
ಬರಬಾರದೇ ನನಗಾಗಿ


ಎಲ್ಲಿರುವೆ ಅಮ್ಮಾ
ನನಗಾಗಿ ಬರಬಾರದೇ
ಅಳುತಿರುವೆ ನಾನಿಲ್ಲಿ
ನಿನಗೆ ಕಾಣಲಿಲ್ಲವೇ
ಎದುರಲ್ಲಿ ಕಾಣಲಿಲ್ಲ ನಿನ್ನಾ
ಕನಸಲ್ಲೂ ಅಪ್ಪಿ ಕೊಳ್ಳಲಿಲ್ಲ ನನ್ನಾ
ಒಮ್ಮೆ ಬಾ ಅಮ್ಮಾ ಈ ಧರೆಗೆ
ಬಿಗಿದಪ್ಪಿಕೊ ನಿನ್ನೇದೇಗೆ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ
ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ನೀ ಮಾಡಿದ ಪುಣ್ಯವೇನು ಭೂಮಿಯಲಿ
ನಾ ಮಾಡಿದ ಪಾಪವೇನು ಸ್ವರ್ಗದಲಿ
ನಮ್ಮಿಬ್ಬರ ಸ್ಥಾನವ ಅದಲು ಬದಲು ಮಾಡಿದ
ಆ ದೇವನಿಗೇನನ್ನಲ್ಲಿ..?????
ಕಾಡಲಾರೆ ಎಂದು, ಬೇಡುತ್ತಿರುವೆ ಇಂದು
ಬಂದು ಬಿಡು ನನ್ನ ಬಳಿ ಹೋಗಬೇಡ
ಆ ನಿನ್ನಾ ದೇವನ ಬಳಿ
ಕೇಳುತ್ತಿದೇ ಅಂತರಾಳ ಎಲ್ಲಿ ನೀನು ಅಂದು
ಹೇಗೇ ಸಮಾಧಾನಿಸಿಕೊಳ್ಳಲಿ ನನ್ನೇ ನಾನು ಇಂದು
ಎಲ್ಲಿರುವೆ ಅಮ್ಮಾ
ನನಗಾಗಿ ಬರಬಾರದೇ