ಅಮ್ಮ
ಅಮ್ಮ
ಅಮ್ಮ ನಿಮ್ಮ ಬಗ್ಗೆ ಏನು ಎಂದು ವರ್ಣಿಸಲಿ
ಎಲ್ಲರೂ ಅಮ್ಮ ಪದದ ನಿಜ ಅರ್ಥ ತಿಳಿಯಲಿ
ಹೃದಯ ತುಂಬಿ ಎಲ್ಲರೂ ಅಮ್ಮನನ್ನು ಕರೆಯಲಿ
ಮಮತೆ ಪ್ರೀತಿ ತೋರುವ ಅಮ್ಮನಿಗೆ ಜೈ ಮೊಳಗಲಿ
ಮಮತೆಯ ತೊಟ್ಟಿಲನ್ನು ನಾವು ಕಟ್ಟಬೇಕು
ಮೃಷ್ಟನಾ ಊಟಕ್ಕಿಂತ ನಿಮ್ಮ ಕೈ ತುತ್ತು ಬೇಕು
ತವರಿನ ತೊಟ್ಟಿಲಿಗೆ ಮರು ಪ್ರೀತಿ ತುಂಬಬೇಕು
ಅಮ್ಮನ ಕನಸಿನ ತೊಟ್ಟಿಲನ್ನು ನಾವೇ ಸೃಷ್ಟಿಸಬೇಕು
ಕಣ್ಣುಗಳಿಗೆ ಇಲ್ಲದ ಬೇಧವನ್ನು ತೊರೆಯಬೇಕು
ಅನಾಥ ಆಶ್ರಮಕ್ಕೆ ತಳ್ಳುವುದನ್ನು ನಿವಾರಿಸಬೇಕು
ಮಾತೆಯ ಮನದಲ್ಲಿನ ನೋವನ್ನು ಅರಿಯಬೇಕು
ಬಾಯಿ ತುಂಬಾ ಅಮ್ಮ ಅಮ್ಮ ಅಮ್ಮ ನುಡಿಯಬೇಕು
ಅಮ್ಮನ ಋಣವನ್ನು ಎಂದು ತೀರಿಸಲಾಗುವುದಿಲ್ಲ
ನಿಮ್ಮ ನಗುವನ್ನು ಯಾರಿಂದ ಕದಿಯಾಗುವುದಿಲ್ಲ
ಮಮತೆಯ ಮಡಿಲು ಎಂದು ಬರಿದಾಗುವುದಿಲ್ಲ
ಅಮ್ಮ ಎಂದು ನೋವು ನಿಮಗೆ ಮಾಡುವುದಿಲ್ಲ
