STORYMIRROR

Chetan Deshpande

Tragedy Classics Others

4  

Chetan Deshpande

Tragedy Classics Others

ಅಪ್ಪು ಅಮರ♥️

ಅಪ್ಪು ಅಮರ♥️

1 min
304

ತಿಂಗಳ ಅಂಗಳಕೆ ಹೊಳೆಯುವ ನಕ್ಷತ್ರ ಬೇಕೆಂದು ಬಯಕೆ

ಕಂಬನಿಯ ಅಲೆಗಳು ಅಪ್ಪಳಿಸಿವೆ ಹೃದಯಕೆ||


ಆಕಾಶವೇ ನೋಡದ ಕೈ ನೀನದು 

ಆದರೆ ಆಕಾಶವೇ ಕೈ ಚಾಚಿದೆ ನೀ ಬೇಕೆಂದು||


ಅಕ್ಷೀ ನೀಡಿ ಬೇರೆಯವರ ಜೀವನದ

ಬೆಳಕಿಗೆ ಸಾಕ್ಷಿ ಆದೆ||


ಪ್ರೀತಿಸಿದೆ ಎಲ್ಲರನ್ನೂ

ಪಯಣ ಮುಗಿಯುವವರೆಗು||


ಪ್ರಥ್ವಿಯಲ್ಲಿ ನೀ ಮಾಡಿದ ಸಹಾಯ ಕಂಡು

ಆಕಾಶವು ಬಯಸಿತು ಎನೋ ನಿನ್ನ ಕೈ ತುತ್ತು||


ಹೋಗಿ ಬರಬೇಕಿತ್ತು ಗಾಜನೂರಿಗೆ

ಆದರೆ ಏಕೆ ಇಷ್ಟು ಬೇಗ ಹೋದೆ ಸಾವಿನೂರಿಗೆ||


 


Rate this content
Log in

Similar kannada poem from Tragedy