ಬಣ್ಣ ಬಣ್ಣದ ಬದುಕು
ಬಣ್ಣ ಬಣ್ಣದ ಬದುಕು
ಊಸರವಳ್ಳಿಯ ಮನಸ್ಸುಗಳಿಗೆ
ಬಣ್ಣದೋಕುಳಿಯ ಶೃ0ಗಾರ
ಬಣ್ಣ ತೊಳೆದು ಹೋಗುವ ಹಾಗೆ
ಬುದ್ಧಿ ತೊಳೆದು ಹೋಗ್ಲಿ
ರಂಗು ರಂಗಿನ ಜನಗಳ ನಡುವೆ
ವ್ಯಂಗ್ಯ ಬುದ್ಧಿಯ ಸಂಘ ಅರಿಯದು ನಮಗೆ
ಹೋಳಿಯಲ್ಲಿ ಬೇರೆ ಬೇರೆ ಬಣ್ಣಗಳು ಮಿಶ್ರವಾಗುವ ಹಾಗೆ
ಇಬ್ಬರು ಒಂದಾಗುವ ಭಾಂದವ್ಯ ಬಿಗಿಯಾಗಲಿ ಹಾಗೆ
ಸಾವಿರ ಬಣ್ಣಗಳ ಬದುಕು
ನಮ್ಮಲ್ಲಿ ನಾವಿರದ ಬದುಕು
ಜೀವನದಲ್ಲಿ ಬಣ್ಣ ಬಣ್ಣದ ಬದುಕು
ಕೆಟ್ಟದನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಬದುಕು
