STORYMIRROR

Ranjitha M

Abstract Tragedy Others

4  

Ranjitha M

Abstract Tragedy Others

ಶೂನ್ಯ

ಶೂನ್ಯ

1 min
499

ಆಸೆಗಳಿದ್ದವು ಬೆಟ್ಟದಷ್ಟು

ದೂರದ ಬೆಟ್ಟ ನುಣ್ಣಗೆ

ಕರಗಿ ಹೋದವು ಆಸೆಗಳು

ಕನಸುಗಳಿದ್ದವು ಆಗಸದಷ್ಟು

ತಾರೆಯಂತೆ ಬಲುದೂರ

ನನಸಾಗಲಿಲ್ಲ ಮಾಯವಾದವು

ಚಂದಿರನು ಒಬ್ಬನಲ್ಲವೇ ಅಲ್ಲ

ಕಣ್ಣಿಗೆ ಕಂಡಿದ್ದು ನಿಜವಲ್ಲ

ಕೋಟಿ ನಕ್ಷತ್ರದ ಬಳಗ ಹೊಳೆದವು

ಭೂಮಿ ಬಿಕ್ಕುತಲಿರುವಾಗ

ನಭವು ಬಂದು ಸಂತೈಸಲಿಲ್ಲ

ಬರಿ ನಾಟಕವೆನ್ನುತ ದೂರವಾಯಿತು

ಅಹಂನ ಗೋಡೆಯ ಕಟ್ಟಿ 

ಸಂಬಂಧಗಳು ಬೇರಾದವು

ಕಾಲದ ಮುಂದೆ ಎಲ್ಲವೂ ಶೂನ್ಯ.



Rate this content
Log in

Similar kannada poem from Abstract