STORYMIRROR

JAISHREE HALLUR

Romance Fantasy Inspirational

4  

JAISHREE HALLUR

Romance Fantasy Inspirational

ಮಲ್ಲಿಗೆಯ ನರುಗಂಪು

ಮಲ್ಲಿಗೆಯ ನರುಗಂಪು

1 min
386

ನಲ್ಲೇ, ಮಲ್ಲಿಗೆಯ ನರುಗಂಪು

ನಿನ್ನಿರವ ತೋರಿ ಕರೆದಿಹುದು ಬಳಿಗೆ..

ಮೆಲುದನಿಯ ಪಿಸುಮಾತಲಿ 

ಬಲ್ಲೆ ನಾ ನಲ್ಲೆ , ಇದಕೆ ನಿನದೇ ಸಲಿಗೆ


ಒಲ್ಲೆನೆನಲಾರೆ ಕೇಳೆ ಚಿತ್ತ ಕೆಣಕಿದೆ

ನೀ ಮುಡಿದ ಮಲ್ಲಿಗೆಯ ಮಾಲೆ 

ಬರಲಪ್ಪಣೆಯುಂಟೇ ಚೆಲುವೇ..

ಇರಲೊಲ್ಲದೀ ಮನವು ಅರೆನಿಮಿಷವೂ


ಕಾಡಿಗೆಯ ಕಂಗಳಲಿ ಬಣ್ಣಬಣ್ಣದ ಕನಸು

ತೋಡೀರಾಗದಲಿ ತೂಗುವ ಹೂಮನಸು

ಮಧುರನೆನಪಲಿ ಕರಗುವ ಭಾವಕುಸುಮ

ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ


ಆಧರಿಸು ಪ್ರೇಮಬಿಕ್ಷೆಯ ನೀಡಿ ಕಾತರಿಸುತಿಹೆನು

ಮುದ್ದಿಸು ಅನುರಾಗದಲಿ ಬೆಸೆದು ಮನಸನ್ನು

ನಗೆಯ ಹೊನಲಲಿ ಅದ್ದಿ ಕದಪುಗಳು ರಂಗೇರಿ

ಬಗೆಬಗೆಯ ಬಯಕೆಗಳ ಚೆಲ್ಲಿ ಕಾಡಿತೆನ್ನನು..


ಕೊಡುಬೇಗ ಸರಸದಲಿ ಕರವಿಡಿದು ಒಲವ

ಬಿಡುನೀನು ಬಿಗುಮಾನ ಸಲ್ಲದದು ನಲಿವ

ಗೆಲ್ಲುವ ನಾವು ಒಲವಲೀ ಜಗವ ಅನುದಿನವು

ಬಲ್ಲವರಾರು ನಾಳೆಯ ನನ್ನ ನಿನ್ನ ಇರವ..


Rate this content
Log in

Similar kannada poem from Romance