STORYMIRROR

Kavya Setty

Romance

4  

Kavya Setty

Romance

ಪ್ರೀತಿ ಪ್ರೇಮದ ಸಮ್ಮಿಲನ

ಪ್ರೀತಿ ಪ್ರೇಮದ ಸಮ್ಮಿಲನ

1 min
378

ಆಸೆಯಾಭಾವ ಹೊಮ್ಮಲು 

ಹೃದಯದಿ ನೀ ಮೀಟಿದೆ 

ಪ್ರೀತಿಯ ವೀಣೆಯ 


ಮನವು ಹಕ್ಕಿಯಂತಾಯಿತು 

ಪ್ರೇಮದಿ ಹೊರಟ 

ನಿನ್ನ ನುಡಿಗಳಿಂದ 


ಮುಡಿದ ಮಲ್ಲಿಗೆಯ ಘಮಲು 

ನುಡಿಯುತ್ತಿದೆ ಪ್ರೀತಿ 

ಪ್ರೇಮದ ಗಾನ 


ಹೊಸ ಬದುಕಿಗೆ 

ನವನವೀನಾ ಕನಸಿಗೆ 

ಬೆಳಕಾಗಿ ಬಂದೆ 


ನವ ವಸಂತದ ಬಾನಿನಲ್ಲಿ 

ನಿನ್ನ ಹೂ ನಗೆ 

ನನ್ನ ಮನದಲ್ಲಿ ಹಚ್ಚಾಗಿದೆ 


ಫಲಿಸಿತು ನಮ್ಮ ಪ್ರೇಮ 

ಒಂದಾಗುವೆವು ಪ್ರೀತಿಯಿಂದ 

ಎಂದೆಂದಿಗೂ 



Rate this content
Log in

Similar kannada poem from Romance