ಮೌನ...???
ಮೌನ...???

1 min

553
ನೀ ಅತ್ತಾಗ
ನಾ ಸಂತೈಸಲಿಲ್ಲವೆಂದೇಕೆ
ದು:ಖಿಸುವೆ ನಲ್ಲೆ
ನಿನ್ನ ಬಳಿ ನಾನಿರುವೆ
ಕಾಣಿಸದೆ ನಿನಗೆ ?
ನಾ ಹಾಡುವ ಮೌನ ರಾಗ
ಕೇಳಿಸದೆ ನಿನಗೆ ?
ನಾನಾಡುವ
ಹತ್ತಾರು ನುಡಿಗಳು
ಕಲಹಕ್ಕೆ ನಾಂದಿ
ಮತ್ತೆ ದು:ಖ, ದುಮ್ಮಾನ
ಬೇಕೆ ನಮ್ಮೊಳಗೆ ?
ನಾನುಡಿವ ಮಾತಿಗಿಲ್ಲ
ನಿನ್ನ ಸಂತೈಸುವ ಶಕ್ತಿ
ಮೌನದಲಿ ನಾನುಡಿವೆ
ಮನದೊಳಗೆ ಮರುಗಿ...
ಕಲಹವೇಕೆ ನಮ್ಮೊಳಗೆ?
ನಮ್ಮಿಬ್ಬರ ತನುಮನವೊಂದಾಗಿ
ಜೀವನ ಪಥ ಸಾಗಿರಲು...
ನನ್ನ ನೀನರಿತಾಗ
ನೀ ನುಡಿವೆ ನಲ್ಲೆ
ಮಾತು ಬೆಳ್ಳಿ
ಮೌನ ಬಂಗಾರ...ಮೌನ ಬಂಗಾರ