ಚಳಿ ಚಳಿ
ಚಳಿ ಚಳಿ
ಅರೆರೆ ಈ ಮುಂಜಾವು ಅದೆಂತಹ
ಚಳಿಯ ತಂದಿದೆಯೊ ಮಾರಾಯ
ಬಿಸಿ ಬಿಸಿ ಕಾಫಿ ಕುಡಿಯ ಬಯಸಿ ಏಳಲು
ಬಿಗಿದಪ್ಪಿ, ಬಿಡೆನು ಇನಿಯ.
ವಯಸು ಮಾಗುತ ಹೋದರೇನು ಮುಂದೆ
ಪ್ರೀತಿಗೆ ಕಟ್ಟೆಯ ಕಟ್ಟುವರೇನು
ಕಪ್ಪು- ಬಿಳಪು, ಸಣ್ಣ-ದಪ್ಪ ಎಂತಹುದಿದು
ಮಡದಿಯ ಕಡೆಗಣಿಸಿ ಬಿಡುವರೇನು ?
ಕರೋನಾ ಬಂತಂತೆ ಎಲ್ಲಾ ಕಡೆಗಳಲಿ
ಬಟ್ಟೆ ಕಟ್ಟಿಕೊಳ್ಳಬೇಕಂತೆ ಮೂಗು ಮೂತಿಗೆ
ಅಂತರ ಕಾಪಾಡಿ ಎಂದು ಕೂಗುವರೇ
ಗಂಡ ಹೆಂಡತಿ ಹೆದರುವರೇ ಈ ತಡೆಗೆ ?
ಹೆಣ್ಣಿಗೆ ಅವಳ ಕೈ ಬಳೆ ಸದ್ದಿಗೆ ಮರುಳಾಗದರೇ ಇಲ್ಲ
ವಯಸಿಗನಾಗಲಿ ಇಲ್ಲ ಮುದುಕ ನಾಗಲಿ
ಈ ಕರೋನಾ ಗಂಡೊ ಹೆಣ್ಣೊ ಅರಿತವರಿಲ್ಲ
ಗಂಡಾದರೆ ಹೆಣ್ಣು ಹುಡುಕಿ ತರಬಹುದಿತ್ತಲ್ವಾ?
ಕಾಯಿಲೆಯೊ ಕಸಾಯಿಯೊ ನರಳುತಿರುವರು
ಸಾವೊ ನೋವು ಮರಣ ಹೊಂದುತಿಹರು
ಕಾಮಕ್ಕೆ ,ಪ್ರೇಮಕ್ಕೆ ಮಾತ್ರ ನೋವು,ಸಾವು ಇಲ್ಲ
ತೋಳ ಬಂದಿಯ ನಡುವೆ ಮರೆವರೆಲ್ಲಾ