ಮನಸ್ಸು
ಮನಸ್ಸು
ನೊಂದು ಬೆಂದಿತಲ್ಲೋ...ಮನಸು ...!!
ನೀ ಬಂದು ಮೂಡಿಸಿದೆ ...ಕನಸು
ಬರಡಾದ ಭೂಮಿಗೆ ಎಲ್ಲಿತ್ತು ಆಸೆ..
ಹಸಿರಾಗಿ ನಗುವಂತೆ ಮಾಡಿತ್ತು ನಿನ್ನ ಭಾಷೆ !! ನೊಂದು!!
ಕೆಳಗೆ ಬಿದ್ದ ಹೂವ ಎತ್ತಿ ಮುತ್ತಿಟ್ಟು !
ಎತ್ತಿ ಏರಿಸಿ ಬಿಟ್ಟೆಯಲ್ಲೋ ಹೊಳಪು ಕೊಟ್ಟು !
ಸತ್ತಿದ್ದ ಆಸೆಗಳಿಗೆ ಮತ್ತೆ ಪ್ರೇಮ ಸಿಂಚನ !
ಜೀವನದಲಿ ಎಂದಿರದ ಸಂಚಲನ ! ನೊಂದು !!
ಏಕೋ ಇಷ್ಟೊಂದು ಒಲವು ನನ್ನಲ್ಲಿ..!
ಬಣ್ಣ ಬಣ್ಣದ ಕನಸು ಇಂದು ಕಣ್ಣಲ್ಲಿ
ಸೋತು ಹೋದೆನೋ..ನಿನ್ನಲ್ಲಿ
ಬೇಧ ಭಾವ ಕಾಣದೆ ಹೋದೆವು ನಮ್ಮಲ್ಲಿ !!ನೊಂದು!!