ತುಮುಲ ತನು ಮನ
ತುಮುಲ ತನು ಮನ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಮನವೆಲ್ಲಿ ಸಾಗುತಿದೆ ಪರಸ್ಪರ ಭೇಟಿಗೆ
ತನುವಿಲ್ಲಿ ಬಾಗುತಿದೆ ಪರಸ್ಪರ ಟೀಕೆಗೆ
ತನುಮನ ಸೇರುತಿರಲು ಭಾವುಕತೆಗೆ
ಜನಮನ ಜಾಗೃತವಾಗಲು ಭಾವೈಕ್ಯತೆಗೆ
ದುಗುಡದ ಜೀವ ಬೇಡವೆಂದಿದೆ ಮನವು
ದುರುಳರ ಸಂಗ ಕಷ್ಟವೆಂದಿದೆ ತನುವು
ಅನೈತಿಕತೆಯು ಅಕ್ಷರಶಃ ಅಸ್ತಿತ್ವವಾಗಿರಲು
ಅಸಾಧಾರಣ ಅನುಭವವು ಅತಿಶಯೋಕ್ತಿಯಾಗಿರಲು