STORYMIRROR

Raghuveera Kamath

Abstract Classics Others

4  

Raghuveera Kamath

Abstract Classics Others

ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ

1 min
1.1K

ಪೌರ್ಣಮೀಯ ಚಂದ್ರಮ ನೀನೆಷ್ಟು ಸುಂದರ

ಬೆಳದಿಂಗಳ ಬಾಲೆ ನೀ ಪೂರ್ಣ ಚಂದಿರ


ಸೌರಭವ ಸೂಸೋ ಭಾನುಮತಿ

ಸೌಂದರ್ಯ ಸುರಭಿ ನೀ

ಸೌಗಂಧ ಬೀರೋ ಚಾರುಮತಿ

ಸೌಭಾಗ್ಯ ಶರಧಿ ನೀ

ನನ್ನೆದೆಯ ಪಾರದರ್ಶಕತೆಗೆ ಪ್ರತಿಬಿಂಬವು ನೀ.


ಬಾನಂಚಿನಲ್ಲಿ ತೇಲೊ

ಬೆಳ್ಳಿಯ ಕುಂಚ ನೀ

ಕೋಲ್ಮಿಂಚಿನಲ್ಲಿ ತೋರೋ

ಅಗ್ನಿಯ ಪುಂಜ ನೀ

ನನ್ನೆದೆಯ ಬಾಳಿನಂಚಿನಲಿ ಮಿನುಗುತಾರೆ ನೀ.



Rate this content
Log in

Similar kannada poem from Abstract