STORYMIRROR

Raghuveera Kamath

Abstract Inspirational Others

3  

Raghuveera Kamath

Abstract Inspirational Others

ಬಣ್ಣ ಬಣ್ಣದ ಲೋಕ

ಬಣ್ಣ ಬಣ್ಣದ ಲೋಕ

1 min
170

ಇದು ಬಣ್ಣ ಬಣ್ಣದ ಲೋಕವಯ್ಯಾ

ಬಣ್ಣಿಸಲು ಸಾಧ್ಯವಿಲ್ಲವಯ್ಯಾ

ರಂಗುರಂಗಿನ ತೋಟದಲ್ಲಿ

ಕೆಂಪು ಗುಲಾಬಿಯು ಕಂಪನು ಸೂಸಿ

ಬೆಳ್ಳಿ ಮೋಡದ ಅಂಚಿನಲ್ಲಿ

ಕಾಮನಬಿಲ್ಲು ಸಪ್ತರಂಗು ಚಾಚಿ

ಹಸಿರು ಭೂತಾಯಿಯ ತೊಟ್ಟಿಲಲ್ಲಿ

ಶಾಂತಿ ಸಂದೇಶದ ಬಿಳಿಯ ತೊಟ್ಟು 

ಕೇಸರಿ ಕ್ರಾಂತಿಯ ಕಳೆದು

ಕಾರುಣ್ಯದ ನೀಲಿನಕ್ಷೆಯ ಬರೆದು

ರಂಗಿನಾಟದ ರಂಗಪರೀಕ್ಷೆಗೆ

ರಂಗು ರಂಗಿನ ಲೋಕವಯ್ಯಾ

ಬಣ್ಣಿಸಲು ಸಾದ್ಯವೇ ಇದನಯ್ಯಾ.



Rate this content
Log in

Similar kannada poem from Abstract