STORYMIRROR

Raghuveera Kamath

Classics Inspirational Others

4  

Raghuveera Kamath

Classics Inspirational Others

ಕನ್ನಡದ ಕನ್ನಡಿ

ಕನ್ನಡದ ಕನ್ನಡಿ

1 min
372

ಕನ್ನಡದ ನುಡಿ ಕಣ್ತೆರೆದು ಮುಡಿ

ಕನ್ನಡದ ಕಂಪು ಸೂಸಿದರು ಕುವೆಂಪು

ಕನ್ನಡದ ಭಾಷೆ ಆಗದಿರಲಿ ಉತ್ಪ್ರೇಕ್ಷೆ

ಕನ್ನಡದ ಬಣ್ಣ ಬಳಿದವರು ಬಸವಣ್ಣ

ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ

ಕನ್ನಡದ ಕನ್ನಡಿಗೆ ಬೇರೆನಿಲ್ಲ ಮಿತ್ಯ

ಕನ್ನಡದ ಡಿಂಡಿಮ ಬಾರಿಸಲು ಢಮಢಮ

ಕನ್ನಡದ ಬಾವುಟ ಕೆಚ್ಚೆದೆಯ ಹೋರಾಟ

ಕನ್ನಡದ ಹಾಡು ಅರಿಯದವರ ಪಾಡು

ಕನ್ನಡಕ್ಕೆ ಸಾಟಿ ಇರುವುದೇ ಪೈಪೋಟಿ

ಕನ್ನಡವೇ ನನ್ನುಸಿರು ಕನ್ನಡಾಂಬೆಯ ಬಸಿರು

ಕನ್ನಡದ ಹುರುಪು ಶಿರ ವಂದಿತ ಮುಡಿಪು

ಕನ್ನಡದ ಜಯಕಾರ ಕನ್ನಡಿಗನೇ ಹರಿಕಾರ

ಕನ್ನಡಕ್ಕೆ ಜೈ ಜೈ ಬಲ್ಲೋನೆ ಸೈ ಸೈ

ಸಿರಿಗನ್ನಡಂ ಗೆಲ್ಗೆ ಕರುನಾಡ ಏಳ್ಗೆ

 

          


Rate this content
Log in

Similar kannada poem from Classics