STORYMIRROR

Raghuveera Kamath

Abstract Classics Others

3  

Raghuveera Kamath

Abstract Classics Others

ಪರಾರಿಯಾಗಿದೆ ಮನಸು

ಪರಾರಿಯಾಗಿದೆ ಮನಸು

1 min
131

ಪರಾರಿ ಆಗಿದೆ ಒಳ ಮನಸು

ಕಠೋರತೆಯ ಕಟ್ಟ ಕೊಡುಗೆಗೆ

ಹೆಬ್ಬೆಟ್ಟಿನ ಗುರುತಿನ ಛಾಪಿನಂತೆ

ಹಿಂದಿರುಗಿ ಹೋಗದೆ ಹೊರ ಮನಸು

ಬಂಜರವಾಗಿದೆ ಸುಂದರ ಕನಸು

ಪಂಜರದಿ ಸಿಲುಕಿದ ಪಕ್ಷಿಯಂತೆ

ನಿಲುಕದ ನಕ್ಷತ್ರ ತಲುಪಲು ವಿಚಿತ್ರ

ಕೋರ್ಟಿನ ಕಟಕಟೆಯಂತೆ ಜೀವನ

ಸತ್ಯ ಮಿಥ್ಯಗಳ ಸಂಸಾರದ ನೌಕೆಯಲಿ

ತುಡಿತ ಮಿಡಿತದ ಸಮಾನಾದ ಈ ಪಯಣ.


            


Rate this content
Log in

Similar kannada poem from Abstract