STORYMIRROR

Surabhi Latha

Abstract Romance Classics

4  

Surabhi Latha

Abstract Romance Classics

ಮಳೆ ಮನಸ್ಸು

ಮಳೆ ಮನಸ್ಸು

1 min
414

ಮೊದಲೆಲ್ಲಾ ಮಳೆ ಎಂದರೆ ಹುಚ್ಚೇದ್ದು ಕುಣಿವ ಆಸೆಯಾಗುತಿತ್ತು ಅಮ್ಮನ ಬೈಗುಳದ ನಡುವೆಯೇ ಒಡಲನ್ನು ಒದ್ದೆಯಾಗಿಸಿ ತೊಪ್ಪೆಯಾದ ಬಟ್ಟೆಗಳ ಮುದುರಿ ಬಚ್ಚಿಟ್ಟುಕೊಂಡೆ ಹಿತ್ತಲ ಬಳಿ ಓಡುತ್ತಿದ್ದೆ. ಗರಿಗೆದರಿದ ಮನಸ್ಸು ಕಾರಣವಿಲ್ಲದೆ ಸಂತಸ ಪಡುತ್ತಿತ್ತು ಆ ವಯಸ್ಸೇ ಹಾಗೇನೋ ಮುಸಿ ಮುಸಿ ನಗಲು ಅಳುಕು ಒಮ್ಮೊಮ್ಮೆ.


" ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಹಾಗೆ ನಗ್ತಾ ಇರಬಾರದು " ಅನ್ನೋ ವಾಣಿ ಅಡಿಗೆ ಮನೆ ಇಂದ ಕೇಳುತ್ತಿತ್ತು


ಅದ್ಯಾವ ಪುಣ್ಯಾತ್ಮ ಹೇಳಿದ್ದೋ ಗೊತ್ತಿಲ್ಲ ಹೆಣ್ಣು ಮಕ್ಕಳು ಜಾಸ್ತಿ ನಗಬಾರದು ಗಂಡು ಅಳಬಾರದು ಅಂತ.

ಅಲ್ಲಾ ಹೆಣ್ಣು ಮಕ್ಕಳಿಗೆ ನಗುವೇ ಬರಬಾರದೇ? ಗಂಡು ಮಕ್ಕಳಿಗೆನು ಹೃದಯ ಇರೋಲ್ಲವೇ ಅವರಿಗೆ ನೋವು ಆಗೋಲ್ಲವೇ?


ತಪ್ಪು ಸರಿ ಅರಿಯುವ ವಯಸ್ಸು ಅಂತೂ ಅದಾಗಿರಲಿಲ್ಲ. ಗೆಳತಿಯರ ಪುಟ್ಟ ಪುಟ್ಟ ಹಾಸ್ಯಕ್ಕೆ ನಗುವುದಂತೂ ಇತ್ತು. ವಯಸ್ಸು ಮಾಗುತ್ತಾ ಬರಲು ಯವ್ವನದ ಹೊಸ ಕನಸುಗಳು ಮೊಳಕೆ ಎದ್ದಿತ್ತು. ಅಜ್ಜಿ ಹೇಳುತ್ತಿದ್ದ ಕಟ್ಟುಕಥೆಯ ಭ್ರಮಾ ಲೋಕಕ್ಕೆ ಹೋಗುತ್ತಿದ್ದೆವು. ರಾಜಕುಮಾರ ಬರ್ತಾನೇ ಬಿಳಿ ಕುದುರೆಯ ಮೇಲೆ ಕುಡಿಸಿಕೊಂಡು ಬೆಟ್ಟದಾಚೆ ಆಕಾಶ ದೇತ್ತರಕ್ಕೆ ಕರೆದೋಯುತ್ತಾನೆ ಹೀಗೆ ಕನಸಿನ ಲೋಕವೇ ಚನ್ನಾಗಿ ಇರುತ್ತಿತ್ತು. ತನ್ನ ಮಯ್ಯ ಬದಲಾವಣೆಯನ್ನು ಕನ್ನಡಿಯಲ್ಲಿ ನೋಡಿಕೊಂಡು ತನ್ನಷ್ಟಕ್ಕೆ ತಾನೇ ನಾಚುವ ಆ ಹುಚ್ಚು ತನದ ಪರಿ ಹೇಳ ತೀರದು

ಕೊನೆಕೊಮ್ಮೆ ರಾಜಕುಮಾರನ ಸ್ವಾಗತವಾಗೇ ಬಿಟ್ಟಿತು.


ಮೋಡ ಚದುರಿ ಮಳೆಯಾಗಿ ಕನಸುಗಳು ಕರೆಗೇ ಹೋಯಿತು. ಆಗಿನ ಮಳೆಯಂತೆ ಈಗಿನ ಮಳೆ ಮನಸ್ಸಿಗೆ ಮುದ ಕೊಡದೆ ಹೋಯಿತು

ಅದೇಕೋ ಮಳೆಯಲ್ಲಿ ನೆನೆಯುವ ಆಸೆ ಕಮರಿ ಹೋಯಿತೋ ಗೊತ್ತಾಗಲೇ ಇಲ್ಲ ಹೆಚ್ಚು ಎಂದರೆ ಸುರಿವ ಮಳೆಯ ಜೊತೆ ಹಬೆಯಾಡುವ ಕಾಫಿಯೊಂದಿಗೆ ಇನಿಯನ ತೋಳ ತೆಕ್ಕೆಯಲಿ ಬಂದಿಯಾಗಬಹುದು


ಮಳೆಯೊಂದೇ ರೀತಿ ಇದ್ದರೂ ಮನಸ್ಸಿನ ಭಾವಗಳು ಹಲವು ಬಗೆಯಲ್ಲವೇ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract