STORYMIRROR

Kavya Setty

Romance

2  

Kavya Setty

Romance

ಗೆಳತಿಯ ಪ್ರೇಮದ ನೆನಪು

ಗೆಳತಿಯ ಪ್ರೇಮದ ನೆನಪು

1 min
117

ನೀ ಮುಡಿದ ಮಲ್ಲಿಗೆಯ ಕಂಪು 

ಮನವ ಕದ್ದು ಓಡುತ್ತಿದೆ 

ನೀ ಬೀರಿದ ಹುಸಿ ನಗೆಗೆ 

ಕಂಗಳು ನಿನ್ನನ್ನೇ ನೋಡುತ್ತಿದೆ 


ಏನು ಜಾದು ಮಾಡಿದೆಯೋ 

ನನ್ನೀ ಹೃದಯಕ್ಕೆ 

ನಿನ್ನಿಂದ ದೂರ ಸರಿಯಾಲಾರದೆ 

ಇರುವೆ 


ಬಿಸಿಲು ಮಳೆಯಲ್ಲಿ ಬರುವ 

ಕಾಮನಬಿಲ್ಲಿನ ಹಾಗೆ 

ನನ್ನ ಮನದ ತುಂಬಾ ರಂಗನ್ನು

ತುಂಬಿಸಿದೆ 


ನೀ ಇರುವ ಪ್ರತಿ ನಿಮಿಷ 

ನನ್ನೇ ನಾ ಮರೆಯುವೆ 

ನೀ ಕೊಟ್ಟ ಪ್ರೀತಿಯ ಕಾಣಿಕೆಗೆ 

ನಾ ನಿನ್ನಲ್ಲೇ ಸೇರುವೆ 


ನಮ್ಮೀ ಪ್ರೇಮದ ನೌಕೆಯಲ್ಲಿ 

ಇಬ್ಬರು ಕೂಡಿ ಸಾಗೋಣ 

ನಮ್ಮೀ ಅನುಬಂಧದ ರಥವನ್ನು 

ಪ್ರೀತಿಯಿಂದ ನಡೆಸೋಣ




Rate this content
Log in

Similar kannada poem from Romance