ನಿನ್ನ ನೆನಪೇ
ನಿನ್ನ ನೆನಪೇ
ಪ್ರೀತಿಯೇ ನೀನು ಎಂದು
ನಂಬಿದೆ ಅಂದು
ಪ್ರೇಮವೇ ನೀನು ಎಂದು
ನಂಬಿದೆ ನಾನಂದು
ನಿನ್ನ ಸುಳ್ಳು ಪ್ರೀತಿಗೆ ಮರುಳಾದೆ
ನಿನ್ನ ಪೊಳ್ಳು ಮಾತಿಗೆ ಜೊತೆಯಾದೆ
ನನ್ನ ಪ್ರೇಮಲೋಕದ ತುಂಬಾ ಅರಿಯದೆ
ನಿನ್ನ ಪ್ರೀತಿಯ ತುಂಬಿದೆ
ನನ್ನ ಮನದ ಭಾವನೆಗಳ ತುಂಬಾ ಅರಿಯದೆ
ನೀನೆ ಆವರಿಸಿದೆ
ನಿನ್ನ ಪ್ರೇಮ ತುಂಬಿದ ಮಾತುಗಳನ್ನು ನಾ ನಂಬಿದೆ
ನಿನ್ನ ಬಣ್ಣ ಬಣ್ಣದ ಮಾತುಗಳಿಗೆ ಮನ ಸೋತಿತು
ನನ್ನ ಒಂಟಿಯಾದ ಮನದ ಜಗತ್ತಿಗೆ ನೀನೆ ಅರಸನಾದೆ
ನನ್ನ ಜೊತೆಯಾಗಿ ಸಾಗದೆ ಒಂಟಿಯಾಗಿ ಮಾಡಿ ಹೋದೆ
ನಿನ್ನ ಮನವ ಅರಿಯದೆ ನಿನಗಾಗಿ ಕಾದೆ
ನೀ ಇಲ್ಲದ ಬದುಕು ನಾ ನೆನೆಯದೆ ಹೋದೆ
ಇದರ ಪರಿವೆಯಿಲ್ಲದೆ ನೀ ನಡೆದೆ
ಮಡಿಲಿನಲ್ಲಿ ಮಲಗಿದ ಮಗುವಿನ ಮುಖ ನೋಡದೆ ನೀ ಹೊರಟೆ
ಜೊತೆಯಾಗಿ ಇರುವೆನೆಂಬ ಮಾತನ್ನು
ಸುಳ್ಳು ಮಾಡಿದೆ
ನಿನ್ನ ಕಲ್ಲಿನ ಹೃದಯ ನನ್ನ ಪ್ರೀತಿಯ ಮಾತಿಗೆ
ಕರಗದೆ ಹೋಯಿತು
ನಿನ್ನ ನೆನಪೇ ಮನದ ತುಂಬಾ ಕಾಡಿದೆ ಇಂದು
ನಿನ್ನ ಪ್ರೇಮದ ತುಂಬಿದ ಕಣ್ಣುಗಳನ್ನು ಮರೆವೆ ನಾನಿಂದು
ಒಂಟಿಯಾಗಿ ಸಾಗಿ ಎದುರಿಸುವೇ ಈ ಜಗವ
ಯಾರ ಕೊಂಕು ಮಾತಿಗೂ ಜಗ್ಗದೆ ನಡೆಯುವೆ ಈ ಜಗದಲ್ಲಿ
ನೀ ಇದ್ದರೂ ಇಲ್ಲದ ಬದುಕನ್ನು ನಾ ನಡೆಸುವೆ
ನಿನ್ನ ನೆರಳು ಸಹ ಸೋಕದೆ ನಾ ಬಾಳುವೆ
ನನ್ನ ನಿಸ್ವಾರ್ಥ ಪ್ರೀತಿ ಅರಿಯುವ ದಿನ ನಾ ನಿನ್ನ ಜೊತೆಯಾಗಿ ನಿಲ್ಲದೆ ಹೋಗುವೆ
ನೀ ಬಿಟ್ಟು ಹೊರಟ ಪ್ರೀತಿಯ ಕುರುಹುವನ್ನು ಸಹ ನಿನಗೆ ಸೋಕದೆ ಹೋಗುವೆ
ನಿನ್ನ ನೆನಪೆಲ್ಲಾ ಮನದಿಂದ ಅಳಿಸಿ ಹಾಕುವೆ
ನನ್ನ ಉಸಿರಿನಲ್ಲಿ ಬೆರೆತ ನಿನ್ನ ಪ್ರೀತಿಯ ಮಣ್ಣಲ್ಲಿ ಮುಚ್ಚಿ ಹಾಕುವೆ
ಎಂದಿಗೂ ಕಾಡದಿರಲಿ ನಿನ್ನ ನೆನಪು
ಮನದಿಂದ ಮಾಸಲಿ ನಿನ್ನ ಪ್ರೀತಿಯೆಂಬ ಸುಳ್ಳು ಮಾತುಗಳು