STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಕೃಷ್ಣ

ಕೃಷ್ಣ

1 min
325

ಕಟ್ಟಿ ಹಾಕದಿರು ನನ್ನ ಅಮ್ಮ 

ತಬ್ಬಿ ಕೊಡುವೆ ಒಂದು ಉಮ್ಮ 

ತಳ್ಳಿದರೆ ಬಂದಾನು ಗುಮ್ಮ 


ಕದಿಯಲಾರೆ ಎಂದೂ ಬೆಣ್ಣೆ 

ತರದಿರು ದಂಡಿಸಲು ದೊಣ್ಣೆ 

ಅಮ್ಮನೆಂದರೆ ನೀನೇ ಜಾಣೆ 


ಕರೆವರು ಮುದ್ದಿಸಿ ನನ್ನನು 

ದೂರುವರು ನನ್ನೆದುರು ನಿನ್ನನು 

ನಂಬು ಮಾತೆ ಎನ್ನನು 


ಬೇಡುವರು ನುಡಿಸಲು ಕೊಳಲು 

ಕೇಳದೆ ಇರಲಿ ಹೇಗೆ ಅವರ ಅಳಲು 

ಮಮತೆಯಲಿ ಸೇರುವೆ ಮಡಿಲು 


ಗೊಲ್ಲನೆನ್ನುವರು ಕಳ್ಳನೆನುವರು 

ಕರಪಿಡಿದು ಕರೆವರೆ ಕನ್ಯೆ ಯರು

ಯಶೋಧೆಯಂತೇಯೇ ಕಾಣ್ವರು 



Rate this content
Log in

Similar kannada poem from Romance