STORYMIRROR

ಹೃದಯ ಸ್ಪರ್ಶಿ

Romance Classics Others

4  

ಹೃದಯ ಸ್ಪರ್ಶಿ

Romance Classics Others

ಓ ಮನಸ್ಸೇ

ಓ ಮನಸ್ಸೇ

1 min
406


ಅಲೆಮಾರಿ ಹೃದಯಕೆ

ಅಪಘಾತವಾಗಿದೆ

ನಿನ್ನ ನಗುವೊಂದು ನನ್ನೀ

ಕನಸ ಕದ್ದೋಯ್ದಿದೆ...


ಕಾಣದ ಕಡಲಿಗೆ

ಹಂಬಲಿಸುವ ಹುಂಬತನ

ಕೈಗೆಟುಕದ ತಾರೆಗೆ

ಏಣಿ ಹಾಕಿದೆ ಮನ


ಅರಿವಿನ ಮೂಟೆ

ಪಕ್ಕಕ್ಕೆ ಸರಿದಿದೆ...

ಮನಸಿಂದು ಆಸೆ ಎಂಬ

ರೆಕ್ಕೆ ಪುಕ್ಕ ಕಟ್ಟಿ ತಪ್ಪೊಂದ ಮಾಡಿದೆ


ನಿನಗಾಗಿ ಹೆಣೆದ ಕನಸಲಿ

ನಾ ಜೀವಿಸಿರುವೆ

ಕನವರಿಸುವ ಕನಸು

ನಿನ್ನ ಮನದ ಜೊತೆ ಬೇಡಿದೆ

 



Rate this content
Log in

Similar kannada poem from Romance