ಮನದರಸಿಯ ನೆನಪಿನಲ್ಲಿ...
ಮನದರಸಿಯ ನೆನಪಿನಲ್ಲಿ...

1 min

170
ನನ್ನೆದೆಯ ಅರಮನೆಯಂಗಳದಲ್ಲಿ
ನೀ ಚುಕ್ಕಿ ಇಟ್ಟ ರಂಗೋಲಿಯ ಸಾಲು
ನಿನ್ನ ದಾರಿ ಕಾದು ಕುಂತಿವೆ
ಹೊಸ್ತಿಲಿಗೆ ಕಟ್ಟಿದ ಮಾಮರದ ತೋರಣವು
ಬಾಡಿಪೋಗಿದೆ ನೀ ಬಾರದೆ
ನಿನ್ನ ಪಿಸು ಮಾತಿಲ್ಲದೆ
ಕೋಗಿಲೆಯೊಂದು ಹಾಡದೆ
ಉಸಿರುಕಟ್ಟಿ ಕೂತಿದೆ
ಮನೆಯಂಗಳದಿ ಅರಳಿನಿಂತ
ದುಂಡು ಮಲ್ಲಿಗೆಯೊಂದು
ನಿನ್ನ ನಗುವ ಕಾಣದೆ
ಆತ್ಮಹತ್ಯೆಮಾಡಿಕೊಂಡಿದೆ
ನಿನ್ನ ಸ್ಪರ್ಶವಿಲ್ದೆ
ತಂಗಾಳಿಯು ಬೀಸದಾಗಿದೆ
ನಿನ್ನ ಆಗಮನಕ್ಕಾಗಿಯೇ
ಕಾಯುತ್ತಿದ್ದ ದಾರಿಯೊಂದು
ಕಾಲ್ಗೆಜ್ಜೆಯ ಸಪ್ಪಳವಿಲ್ಲದೆ
ಮೌನವಾಗಿಯೇ ಮಲಗಿದಂತಿದೆ
ನಿನಗಾಗಿ ಕಾಯುತ್ತಿದ್ದ
ಬೀದಿದೀಪವೊಂದು
ಬೆಳಕಿರದೆ ಮಂಕಾಗಿಯೇ ನಿಂತಂತಿದೆ
ನಿನ್ನ ಪಿಸು ಮಾತಿಲ್ಲದೆ
ಗೆಜ್ಜೆಯ ಗಲ್ ಗಲ್ ಸಪ್ಪಳವಿಲ್ಲದೆ
ನಿನ್ನ ಮುಗುಳ್ನಗೆಯಿಲ್ಲದೆ
ನಿನ್ನ ಸ್ಪರ್ಶವಿಲ್ಲದೆ ,ನೀನಿಲ್ದೆ
ಏನಿದ್ದರೇನು ಎದೆಯ
ಅರಮನೆಯು ಬಿಕೋ ಎನಿಸುತ್ತಿದೆ