ಓ ನನ್ನ ಮನಸ್ಸೇ....
ಓ ನನ್ನ ಮನಸ್ಸೇ....
ಹೇಳದೇ ಬಂದಿರುವ ಈ ನನ್ನ ಮನಸ್ಸಿಗೆ
ನನ್ನನ್ನು ನೀ ಆವರಿಸಿರುವೆ
ನೀ ಇದ್ದು ಇಲ್ಲದಂತ ಈ ನನ್ನ ಒಂಟಿಯಾದ ಜೀವನ ಸಾಕಾಗಿದೆ......!
ಪ್ರೀತಿನ ಪ್ರೀತಿಯಿಂದ ಪ್ರೀತ್ಸಿದ್ದೇ ತಪ್ಪಾ? ಅಥವಾ
ನಾನು ಪ್ರೀತಿಯಿಂದ ಮಾತನಾಡಿಸಿದ್ದೇ ತಪ್ಪಾ?
ಏಕೀತರ ನೋವುಂಟು ಮಾಡಿದೆ,
ಹೇಳು ಬಂದು ನೀ ನನ್ನ ಹೃದಯಕ್ಕೆ ....
ನಾ ಅಂದು ಆಡಿದ ಮಾತುಗಳು ನಿಜವಾದರೂ
ಅರ್ಥಮಾಡಿಕೊಳ್ಳದೇ ನೀ ಏಕೆ
ಮೌನವಾಗಿ ಕುಳಿತು ಬಿಟ್ಟೆ ,
ಬಾಯ್ತುಂಬ ನಗುತ್ತಿದ್ದರೂ ಸಂತೋಷವಿಲ್ಲ ನನಗೆ
ನನ್ನ ಪ್ರೀತಿಗೆ ಬೆಲೆಯೇ ಇಲ್ಲವಾ? ಅಥವಾ
ನನ್ನ ಪ್ರೀತಿ ನಿಜವೇ ಅಲ್ಲವಾ!
ಹೇಳು ನೀ ನನಗೆ
ಯಾವುದು ನನ್ನಲ್ಲಿ ನೀ ಕಂಡ ತಪ್ಪುಗಳು ,
ಯಾವುದೋ ಕಾಣದ ತೀರದಲ್ಲಿ
ಕೈ ಬೀಸಿ ಕರೆಯುತಿದೆ
ನಿಜವಾದ ಪ್ರೀತಿ
ಆದರೆ ಕಾಣದ ಪ್ರೀತಿ ಹುಡುಕಿದರೆ ಸಿಕ್ಕೀತೇ...?
ನೀನಿರುವಲ್ಲಿಗೆ ಸೆಳೆಯುತಿದೆ
ಈ ನನ್ನ ಮನವು
ನಿನ್ನ ಪ್ರೀತಿ ಪಡೆಯಲು ಕಾತರಿಸಿದೆ
ನೀ ಎಂದು ಬರುವೇ ನನ್ನಲ್ಲಿಗೆ
ಓ ನನ್ನ ಮನಸ್ಸೇ....?