ಹಸಿವಿನ ಆಕ್ರಂಧನ
ಹಸಿವಿನ ಆಕ್ರಂಧನ


ಅಮ್ಮ ಹಸಿವು ,ಅಯ್ಯೋ ಹಸಿವೂ
ನಾ ತಾಳಲಾರೆನಮ್ಮಾ...
ನೀನೆಲ್ಲಿರುವೆ ಅಮ್ಮಾ
ನನ್ನನೇಕೆ ಬೀದಿಗೆ ಎಸೆದೆ
ನೀನೆಲ್ಲಿರುವೆ ಅಪ್ಪ
ನನ್ನನೇಕೆ ತೊರೆದೆ....?
ಅಮ್ಮ ಅಮ್ಮ ಎಂದು ಯಾರು ಕೂಗಿದರೂ
ನನ್ನ ಮನವು ಮೂಕವಾಗಿ ರೋದಿಸುವುದು
ಮೌನವಾಗಿಯೇ ಕೂಗುವುದು ಅವ್ವ ಎಂದು,
ಎಂದಿಗಾದರೂ ನನ್ನ ಈ ಮೂಕ ವೇದನೆ
ನಿನ್ನ ಮನಸ್ಸಿಗೆ ತಟ್ಟುವುದೆಂಬ ಆಸೆಯಲ್ಲಿ
ನಿನಗಾಗಿ ಕಾದಿರುವೆನು...
ಅಪ್ಪ ಅಪ್ಪ ಎಂದು ಯಾರು ಕರೆದರೂ
ಮಾತು ಮೂಕವಾಗುವುದು
ನನ್ನ ಈ ವೇದನೆ,ನೋವು
ನಿನ್ನ ಹೃದಯವ ಸೇರಿ ಸ್ಪಂದಿಸುವಂತೆ ಮಾಡದೇ ಹೋಗುವವೇ ಎಂಬ ಆಸೆಯಲ್ಲಿ
ನಿಮಗಾಗಿ ಕಾದಿರುವೆನು...
ಎದೆಗೆ ಅಪ್ಪಿ ನನ್ನ ಸಾಂತ್ವಾನಪಡಿಸುವರಿಲ್ಲ
ಮಡಿಲಿಗೆ ಹಾಕಿ
ಮುದ್ದಾಡುವರಿಲ್ಲ
ನನ್ನ ನೋವು ,ವೇದನೆ ನೋಡುವರಿಲ್ಲ
ನನ್ನ ಕೈಹಿಡಿದು ನಡೆಸುವವರಿಲ್ಲ..!
ಹಸಿವಿನಿಂದ ನರಳುತ್ತಿರುವ ಈ ಒಡಲಿಗೆ
ತುತ್ತು ಅನ್ನ ನೀಡುವವರೆ ಇಲ್ಲವೇ..?
ನನ್ನ ಹಸಿವಿನ ಆರ್ತನಾದವ ,
ನನ್ನ ನಿಸ್ಸಾಹಯಕತೆಯ ಮೊಗವ ನೋಡಿ
ಕರುಣೆ ಬಾರದವರೇ ಇಲ್ಲವೇ...?
ನಾನಿರುವೆನು ನಿನಗೆ ಎಂದು ಹೇಳುವವರೆ ಇಲ್ಲವೇ...?
ಹೌದೌದು ,ಹೆತ್ತ ತಂದೆತಾಯಿಗೆ
ನನ್ನ ಮೇಲಿರದ ಪ್ರೇಮಾನುರಾಗ
ಅನ್ಯರಲ್ಲಿ ಹುಡುಕುವುದು ಅಪರಾಧವಾದೀತು...
ದೇವರೇ ! ಭೂಮಿಯ ಮೇಲೆ
ನನ್ನಂತವರಿಗೆ ಜನ್ಮ ನೀಡದಿರು ....
ಅನ್ನಪೂರ್ಣ ದೇಶದಲ್ಲಿ
ನನ್ನ ಹಸಿವಿನ ಸಾವಿಗೆ
ನನ್ನ ದೇಶದ ವ್ಯವಸ್ಥೆ
ಕಾರಣವಾಗದಿರಲಿ.....