ಅನುರಣನ
ಅನುರಣನ

1 min

114
ಹರೆಯದ ಹೂ ಮನದ ಆರಾಧನೆ ಒಲವು
ತಿದ್ದಿ ತೀಡಿರದ ಪ್ರೀತಿ ರೂಪದ ಪ್ರತಿ...
ಭಾವ 'ಅಹಂ' ನದಲ್ಲ ಸಹಜ ನಿವೇದನೆ
ಅರ್ಥವಾದೀತು ನಿನ್ನ ಹೆಂಗರುಳಿಗೆ...
ನನ್ನೊಲವು ಉತ್ಕಟದ ಉತ್ತುಂಗವೇ ಸರಿ
ನಿನಗೂ ಹಾಗನಿಸಬೇಕೆಂದಿಲ್ಲ...
ನಾ ನಿನ್ನ ವ್ಯಸನಿ ನಿಜ ನಿನದೇ ಬಯಕೆ
ಹಾಗೆಂದು ನೀ ಮಾದಕವಾಗಬೇಕಿಲ್ಲ...
ನೀ ನನ್ನಂಗಳದ ನಿತ್ಯ ಬೆಳದಿಂಗಳೇ
ಚೌಕಟ್ಟಿನಲೆ ಇರಲು ನನ್ನ ಆಗ್ರಹವಿಲ್ಲ...
ನೀ ಪ್ರೀತಿ ಗುಡ
Advertisement
ಿಯ ನಿತ್ಯ ನಂದಾದೀಪ
ಹೊಳೆಯುತ್ತಲೇ ಬೆಳಗುತಿರು...
ಹೊಳಪ ಜತನಕೆ ತಂಗಾಳಿ ನಾನಾಗಿ
ಬಳಿ ಸುಳಿದು ಸುಖಿಸುತ್ತೇನೆ...
ಕಿರುಗಣ್ಣ ಸಣ್ಣ ಗಮನವಿಟ್ಟರೂ ಸಾಕು
ಕಾಪಿಡುವೆ ಕಣ್ಮನಸ ಒಲವಿನೊರತೆ...
ಅತಿರೇಕವೆನಿಸೀತು ಈ ಪರಿಯ ರೀತಿ
ಯಾಕೋ ಆ ರಾಧೆ ಬಹಳ ಕಾಡುತ್ತಾಳೆ...
ಆವರಿಸುತ್ತಾಳೆ...ಅನುರಣಿಸುತ್ತಾಳೆ...
ಅವಳ ಅನುರಾಗವನೆ ಅಣಿಯಾಗಿಸುತ್ತಾಳೆ...