STORYMIRROR

JAISHREE HALLUR

Romance Fantasy Others

4  

JAISHREE HALLUR

Romance Fantasy Others

ಒಲವ ಸಂಪತ್ತು

ಒಲವ ಸಂಪತ್ತು

1 min
362

ಗೆಳೆಯಾ,

ನಿನ್ನೊಳಗಿನ ಒಲವು ಅಪಾರ ಬೆಲೆಯುಳ್ಳದ್ದು

ಅದು ಎಂದೂ ಮುಗಿಯದ ಸಂತೆಯ ಸರಕು

ಖರೀದಿಸಿದಷ್ಟೂ ಇಷ್ಟವಾಗುವ ಸಂತಸದ ವಸ್ತು

ಆಧರಿಸಿದಷ್ಟೂ ಅರಳುವ ಪುಷ್ಪ್ರ ಸಂಪತ್ತು


ಸಂತೆಯಲಿ ನಿಂತು ಕಾಯುವ ಬಾಬತ್ತು ನನ್ನದೇ

ಕಂತೆ ಕಂತೆ ಒಲವ ಖರೀದಿಸಿ ಜೀವನಬಂಡಿಯಲ್ಲಿ

ತುಂಬುತ ದಾರಿಯುದ್ದಕ್ಕೂ ಸಾಗುವ ಹಾದಿಯಲ್ಲಿ

ಚಿಂತೆಯೆಂಬ ಮುಳ್ಳಿಲ್ಲ ಸಧಾ ಹೂಬಳ್ಳಿಗಳೇ


ನಿನ್ನ ಅನುಪಸ್ಥಿತಿಯಲ್ಲೂ ನೆನಪುಗಳ ಸರಕುಂಟು

ಹತ್ತಿರವಿದ್ದಷ್ಟು ಹೊತ್ತೂ ಮುದ್ದಿಸುವ ಹೊಸನಂಟು

ಬತ್ತಲಾರದ ಎದೆಯ ಪ್ರೀತಿ ಒರತೆ ನಿನ್ನೊಳಗುಂಟು

ಒಮ್ಮೆ ಇತ್ತುಬಿಡು ಎಲ್ಲವನು ಮತ್ತೆ ಮತ್ತೆ ಕೇಳಲೆಂತು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance