STORYMIRROR

JAISHREE HALLUR

Romance Classics Fantasy

4  

JAISHREE HALLUR

Romance Classics Fantasy

ಓ ಸಂಜೇ ,

ಓ ಸಂಜೇ ,

1 min
265

ಓ ಸಂಜೇ ,

ಅವ ಬರುವ ಹೊತ್ತೆಂದು ಗೊತ್ತೆ ನಿನಗೆ?

ನತ್ತಿನ ಮುತ್ತು ನಲುಗಿ ಒತ್ತುತಿದೆ ಎನಗೆ.


ಉಟ್ಟ ಸೀರೆಯ ನೆರಿಗೆ ಕಾಲ್ಬೆರಳ ತಾಕುತಿದೆ

ಕಟ್ಟಿದಾ ತುರುಬು ಕೈಗಮರದೆ ಜಾರುತಿದೆ

ಇಟ್ಟ ಹಣೆಬೊಟ್ಟು ಕರಗಿ ಬೆವರಿಳಿಯುತಿದೆ

ಬಿಟ್ಟು ಹೋದ ನೆನಪುಗಳೆಲ್ಲ ಮರುಕಳಿಸುತಿದೆ


ಮಾಳಿಗೆಯೇರಿ ಸಂಜೆಗಂಪಿನಮಲ ಹೀರಿ

ಸುಳಿದಾಡುವ ಬಳ್ಳಿಗೊಂಚಲ ಹೂವ ಕಿತ್ತು

ತೆರೆದಿಟ್ಟ ಬಾಗಿಲಿಗೆ ಮಾಲೆ ಕಟ್ಟಿ ಕಾಯುತಿಹೆ

ಒಲವ ತುಂಬಿದ ಕೊಡ ತಂದು ಸುರಿವನೆಂದು


ಮೆಲುನಗೆ ಮೃದುಮಾತಿನ ಮಲೆನಾಡಿನ ಮಲ್ಲ

ಮೈಮನಸಲೆ ಮಿಸುಕಾಡಿಸಿ ಕಾಡುವಂತವನಲ್ಲ

ಮುಗಿಯದ ಯಾನಕೆ ಮಗ್ಗುಲಾದವ ಮೌನದಲ್ಲೆ.

ಮಾಗುವ ಭಾವಕೆ ಮಿಡಿಯುವ ಅನುರಾಗ ಚೆಲ್ಲಿ.


ಓ ಸಂಜೆ , ನೀನೆಷ್ಟು ಸಂಭ್ರಮಿಸುವೆ ನನ್ನವನಿಗಾಗಿ

ಹಂಚಿ ಸಿಂಗರಿಸುವೆ ಒಲವ ತೋರಣ ಕಟ್ಟಿ 

ತುಂತುರು ಮಳೆಹನಿ ಸಿಂಚನದಿ ಕಂಪಿಸುವೆ

ಹೂವ ಹಾಸುವೆ ನೀನು ಅವ ಬರುವ ದಾರಿಗೆ...


Rate this content
Log in

Similar kannada poem from Romance