STORYMIRROR

Ranjitha Ranju

Crime Inspirational Children

4  

Ranjitha Ranju

Crime Inspirational Children

ಅಣ್ಣ-ತಂಗಿಯ ಭಾವಾನುಬಂಧ

ಅಣ್ಣ-ತಂಗಿಯ ಭಾವಾನುಬಂಧ

1 min
256


ಅಮ್ಮಾ ನೋಡಮ್ಮ ರಿಮೋಟ್ 

ಕೊಡುವುದಿಲ್ಲ ಎಂದು ದೂರು ಹೇಳುತ್ತಿದ್ದಂತೆ 

ತಟ್ಟನೆ ತಲೆಗೆರೆಡು ಬಿದ್ದಿತು ಅಣ್ಣನೆಂಬ ಅಹಂಕಾರಿಯ ಕೈಯಿಂದ...ಅಳುತ್ತಾ ಕುಳಿತೆ ಮತ್ತೆ ಬಂದ ಮೆಲ್ಲನೆ ಮಳ್ಳನ ಹಾಗೆ!!ಕಣ್ಣೀರೊರೆಸಲು ಅಲ್ಲ ತಟ್ಟೆಯಲ್ಲಿದ್ದ ಅಪ್ಪಳ ತಿನ್ನಲು.....

ಶಾಲೆಗೆ ಬಿಡೆಂದರೆ ಬಿಡದ ತಾನೂ ಕಾಲೇಜಿಗೆ ಹೋಗದ ಸೋಮಾರಿಗೆ ನನ್ನ ಮೇಲೆ ಅತಿಯಾದ ಪ್ರೀತಿ ಆಗಾಗ.. ಇದೇನಿದು ಆಶ್ಚರ್ಯ ಇವತ್ತು ಜಾಂಗೀರು ತಂದುಕೊಟ್ಟನಲ್ಲ ಎಂದು ಖುಷಿಪಟ್ಟರೆ ರಾಶಿ ನೋಟ್ಸ್ ತಂದು ಬರೆ ಎಂಬ ಶಿಕ್ಷೆ ನೀಡುವ ಪಾಪಿ...


ಆದರೂ ಒಮ್ಮೊಮ್ಮೆ ಖರ್ಚಿಗೆ ಕಾಸು,ಹೊಸ ಕೋಟು,ಚಾಕೋಲೇಟ್ ಕೊಡಿಸುವ,ರಾಕಿ ಕಟ್ಟಿದರೆ ಉಡುಗೊರೆ ನೀಡುವ,ಚುಡಾಯಿಸಿದವರ ಚಳಿ ಬಿಡಿಸುವ ನನ್ನಣ್ಣ ನಿಜವಾಗಿಯೂ ಒಳ್ಳೆಯವ,ಜಗಳವೇನಿದ್ದರೂ ಜವಾಬ್ದಾರಿ ವಹಿಸುವನು,ಭಾವನೆಗಳಿಗೆ ಸ್ಪಂದಿಸುವನು ನನ್ನಣ್ಣ..ನಗುವ,ನಗಿಸುವ ಆ ಸಹೋದರನಿಗೆ ಮತ್ತೆ ಮತ್ತೆ ತಂಗಿಯಾಗಿ ಹುಟ್ಟುವಾಸೆ,ನನ್ನೆಲ್ಲಾ ನೋವುಗಳ ಮರೆಯುವಾಸೆ,ನಿತ್ಯ ಬಳಿಯಿರಬೇಕೆಂಬ ಪುಟ್ಟ ಆಸೆ,

ಶತಾಯುಷಿಯಾಗಿರಲೆಂಬ ಮಹದಾಸೆ!!


Rate this content
Log in

Similar kannada poem from Crime