STORYMIRROR

Arjun Maurya

Tragedy Action Crime

4  

Arjun Maurya

Tragedy Action Crime

ಜಾತಿ ವಿಷದ ಬೀಜ

ಜಾತಿ ವಿಷದ ಬೀಜ

1 min
271

ಜಾತಿ ವಿಷ ಬೀಜದ ಮರ

ಆಳ ಅಗಲದಿ ಬೆಳೆದಿದೆ I

ಬೇಕಿಲ್ಲ ಅದಕೆ ಗಾಳಿ ಮಳೆ

ಜ್ಞಾನ ಸೂರ್ಯದ ಬೆಳಕು II


ಬುದ್ಧಿಗೆಟ್ಟ ಗೊಬ್ಬರ ಸಾಕು

ಹುಲುಸಾಗೆ ಬೆಳೆಯುತ್ತದೆ I

ಉದ್ದುದ್ದ ಹರಡಲು ಬೇಕು

ಹೊಲಸು ನಾಲಗೆಗಳವಕೆ II


ಎಲ್ಲಿ ಬೆಳೆಯಲಾರದೇಳಿ?

ಶಾಲೆ ಕಾಲೇಜನ್ನೂ ಬಿಟ್ಟಿಲ್ಲ I

ವಿಶ್ವವಿದ್ಯಾಲಯವನ್ನೂ..

ವಿಶಿಷ್ಟ ಪದ‌ನಿಮಿತ್ತರನ್ನೂ II


ಬುದ್ದಿಗೆ ಒಮ್ಮೆ ಸೇರಿದರೆ

ರಕುತದಲ್ಲೇ ಹರಿವುದಿದು I

ಹತ್ತಿರ ಬಿಡಗೊಡದಂತೆ

ದೂರವೇ ಉಳಿಯುವುದು II


ಸಾಹಿತ್ಯದಲ್ಲೂ ವಿಷಬೀಜ

ಲೇಖಕ ಸಂಪಾದಕರಲ್ಲೂ I

ಪ್ರತೀ ಕೊಂಬೆಗಳವರೆಗೆ

ಪ್ರತೀ ಹೂವುಗಳವರೆಗೆ II


ದ್ವೇಷದ ಬೆಂಕಿಯುಗುಳೋ

ಮನುಜನಲ್ಲಿ ಚಿಗುರೊಡೆದು I

ಸಮಾಜದಿ ಹಬ್ಬುವ ಬಳ್ಳಿ

ಹರಡುವ ಜಾತಿ ವಿಷ ಬಿಜ II


Rate this content
Log in

Similar kannada poem from Tragedy