STORYMIRROR

Arjun Maurya

Romance Tragedy Classics

4  

Arjun Maurya

Romance Tragedy Classics

ವಂಚಿತ

ವಂಚಿತ

1 min
299

ತನುವ ಅರಸಿ ರಸವ ಹೀರಿ

ಸೃಷ್ಠಿ ಬಯಕೆ ಹೊತ್ತು ತಂದ

ದುಂಬಿಯೊಂದು ಹೂವಿನೆದುರು

ಭಾವರಸವ ಅದುಮಿ ಇಟ್ಟು 

ಮೌನವಾಗೇ ನಿಂತಿತು ||


ನಿರೀಕ್ಷೆಯೊಡಲ ತುಂಬಿ ನಿಂತ 

ಅರಳಿ ನಿಂತ ಹೂವು ಮಾತ್ರ 

ಬೇಸರದಿ ದುಂಬಿ ಬಿಟ್ಟು

ನಿರಾಸೆಯಿಂದ ಸರಿಯಿತು ||


ಒಂಟಿಯಾದ ದುಂಬಿ ಮಾತ್ರ

ಅರಳಿದೂವ ನೆನಪಿನಲ್ಲಿ

ತುಂಬಿ ಬಂದ ಭಾವರಸವ

ಕೈಚೆಲ್ಲಿ ಹರಿಸಿತು |


Rate this content
Log in

Similar kannada poem from Romance