ಹಾದಿ ಬದಿಯಲೇ..
ಹಾದಿ ಬದಿಯಲೇ..
1 min
8
ಆಕಾಶದೆತ್ತರಕ್ಕೇರಬೇಕಿತ್ತಲ್ಲ
ಹಸಿದೊಡಲ ಉಸಿರನ್ನೊತ್ತ
ಬದುಕ ಬಲೂನುಗಳು l
'ಭೀಮ' ನಡೆದ ಹಾದಿಬದಿಯಲೇ
ಕಾರ್ಗತ್ತಲ ಸೂಜಿಗಳು?
ಹಾರುವ ಮುನ್ನವೇ..?l
ಬದುಕಿನ ಉಸಿರನೇ ದಹಿಸಿತ್ತಲ್ಲ?
ಸ್ವರ್ಗದ ಬೆಳಕಿನ ಮೂಲೆಯಲಿ
ಹಬ್ಬದ ಉಬ್ಬಸವೇರಿ l
ಕಪ್ಪುಚುಕ್ಕೆಯ ವಿಕೃತಿಯೊಂದು
ಸಂಸ್ಕೃತಿನಗರದ ಪರದೆಗೆ
ರಾಚಿ
ಗಾಯಗೊಳಿಸಿದೆ l
ಕಮರಿಹೋದ ಪುಟ್ಟಕಂದಮ್ಮ
ಹುಡುಕುತ್ತಿದೆ ದನಿಗಳಿಗಾಗಿ
ನ್ಯಾಯಕ್ಕಾಗಿ..ll

