ಕ್ಷಮೆ
ಕ್ಷಮೆ
ಬತ್ತಿದ ಕಣ್ಣುಗಳೊಳಗೆ
ನೋವಿನಮುಳ್ಳುಗಳೇನೇ
ಇರಲಿ..ಮೈತ್ರಿಯು ದೃಷ್ಟಿಯು
ಬತ್ತಿರಲಿಲ್ಲ
ಆಳಕ್ಕಿಳಿದ ನಿನ್ಹೊಟ್ಟೆಯ
ಈಟಿ ಮೀಟಿದರೂ..
ಮಿಸುಕಾಡದ ಕರುಣೆಯಾ
ಆ ಒಡಲು...ಬೆಳಕಿನ್ಹೊನಲು..
ರಕ್ತದ ಕೋಡಿಯ ನಡುವೆ
ಮುಳ್ಳುಗಳೂ ಬಾಗುವ
ಪ್ರೀತಿಯ ಕಡಲು..
ಜಡಿದ ಮೊಳೆಗಳ ಅಟ್ಟಹಾಸದ
ನಡುವೆ ಮೂಡಿದ ಕರುಣೆಪುಷ್ಪವು
ರಕುತದೋಕುಳಿ ಹರಿಯುತ್ತಿದ್ದರೂ...
ಪ್ರೀತಿಯ ಕಡಲು
ಬೇಡಲಿಲ್ಲ ಏನೂ
ನಿನಗಾಗಿ ..
ಬೇಡಿದ್ದು ಮಾತ್ರ
ಕೈಗಳಿಗೆ ಮೊಳೆ ಜಡಿದವರಿಗೆ
ಮುಳ್ಳಿನಕಿರೀಟ ಏರಿಸಿದವರಿಗೆ
ನಿನ್ನ ಸಾವಿನಲ್ಲೂ ಸಂಭ್ರಮಿಸುವ
ಮನಸ್ಸುಗಳಿಗೆ...
ಕೊನೆಯುಸಿರಲಿ ಬಂದ
'ಕ್ಷಮಿಸಿಬಿಡು' ಪದ
ದ್ವೇಷದ ಕೆನ್ನಾಲಿಗೆಗೆ
ತಂಪುಹಸಿರನೆರೆದ
ಮಾತೃಹೃದಯ ..
