Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Tragedy Classics Inspirational

4  

Arjun Maurya

Tragedy Classics Inspirational

ಕಡಲ ಒಡಲು

ಕಡಲ ಒಡಲು

1 min
258


ಸೂರ್ಯರಶ್ಮಿ ವರ್ಣದೊಡಲು ಕಡಲ ಅಲೆಯ ಚಿತ್ರದೊಡಲು |

ಸಾಗರದ ಹಾದಿಯಲ್ಲಿ

ಸಣ್ಣದೊಂದು ಚುಕ್ಕಿ ಹರವು ||

ಬರಿದು ಚುಕ್ಕಿಯಲ್ಲವದು

ಭರವಸೆಯ ಬದುಕ ದೋಣಿ |

ಒಡಲುಗಳ ತುಂಬಲು

ದೊಡ್ಡದಾದ ಬಲೆಯ ಹರವು ||

ರೆಪ್ಪೆ ಮುಚ್ಚದಂಥ ದೃಷ್ಠಿ

ಕಾಯುತ್ತಿವೆ ನಿರೀಕ್ಷೆಯೊಡಲು |

ಚಿಂದಿ ಬಟ್ಟೆಯುಟ್ಟು ನಿಂತ

ಮಡದಿ ಮಕ್ಕಳೊಲವ ಕಡಲು ||

ದೂರದೋಣಿಯೊಳಗೆ ಆತ

ಕಪ್ಪು ಮೈಯ ಜೀತ ದೇಹ |

ದೋಣಿಯಂತೇ ತೇಲಬೇಕು ಅಲೆಗಳಾಗೇ ಕುಣಿಯಬೇಕು ||

ಕಡಲದೋಣಿ ತುಂಬಬೇಕು

ಬೆವರ ಮೈ ಹೊಳೆಯಬೇಕು |

ಹರಕು ಚಿಂದಿ ತೊಟ್ಟ ಆಕೆ

ಹೊಟ್ಟೆ ತುಂಬಾ ತಿನ್ನಬೇಕು

ಎಲ್ಲರಂತೆ ಬದುಕಬೇಕು ||


Rate this content
Log in

Similar kannada poem from Tragedy