STORYMIRROR

Arjun Maurya

Inspirational

4  

Arjun Maurya

Inspirational

ಕಪ್ಪು ಮಣ್ಣಿನ ಬೇರು

ಕಪ್ಪು ಮಣ್ಣಿನ ಬೇರು

1 min
0

ಗಟ್ಟಿ ಬೇರು - ಗಟ್ಟಿನಾರು
ಶಾಸ್ತ್ರದ ಚೌಕಟ್ಟಿಲ್ಲದ ಮರ
ಸೊಗಡನ್ನಡರಲು
ಸಿಂಪಡಿಸಿದ ಕೃತಕ
ಪರಿಮಳದ ಹೂಗಳಂತಿರುವ
ಮರವಲ್ಲವದು I
ಗಟ್ಟಿ ಬೇರು - ಗಟ್ಟಿನಾರು II

ಅಜರಾಮರವಿದು
ವಿಚಾರ ವಿಶಾಲತೆ ಕಳ್ಳುಬಳ್ಳಿಗಳಿವೆ
ಆಳಕ್ಕಿಳಿದ ಎದೆಯಾಳದ
ಬೇರಿದೆ II
ನೊಂದಷ್ಟೂ ಆಳ 
ಅತ್ತಷ್ಟೂ ಹರವು II

ಗತ ಹೆಜ್ಜೆಗಳ ಅಚ್ಚೊತ್ತಿದ
ಸಾರವ ಹೀರಿದೆ
ಮತ್ತಷ್ಟೂ ದೃಢವಾಗಿದೆ II

ಬಹುತ್ವ' ದ ಪರಿಮಳದ
ನಂಟಿನ ದಂಟಿನ ಎಲೆಗಳಿಗೆ
ಸ್ವಾನುಭಾವದ
ಸೂರ್ಯಕಿರಣಗಳಿವೆ II
ಕೃತಜ್ಞ ಫಲಗಳೋ ಮಾಗಿವೆ..
ಬಣ್ಣಬಣ್ಣಗಳ ಸೊಗಡು
ಹರಡಿವೆ II

ನೆಲಕ್ಕುರುಳಿದ ಎಲೆಗಳು
ಕಚ್ಚಾಡಿದ್ದೂ ಇದೆ II
ಎಡಬಲವೆಂದೊ..
ಉತ್ತರದಕ್ಷಿಣವೆಂದೊ II
ವಿಚಲಿತಗೊಳ್ಳದ ಬೇರು ಮಾತ್ರ
ಗಟ್ಟಿಯಾಗಿದೆ I  ಕಾರಣ
ಸಮತ-ಪ್ರಜ್ಞಾ-ಕರುಣಾದ
ಧಮ್ಮಸಾರವಿದೆ
ಹಾಗಾಗಿ
ಬೇರು ಗಟ್ಟಿಯಿದೆ
ಅದೇ ಆಳ - ಅದೇ ಹರವು  III


Rate this content
Log in

Similar kannada poem from Inspirational