Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sonu Imambhai

Classics Crime Inspirational

2.6  

Sonu Imambhai

Classics Crime Inspirational

ಭ್ರೂಣ ಹತ್ಯೆ

ಭ್ರೂಣ ಹತ್ಯೆ

1 min
252


ನಾನಿನ್ನು ಜಗವನ್ನೇ ನೋಡಿಲ್ಲ

ತಾಯಿಯ ಗರ್ಭವೇ ನನಗೆಲ್ಲ

ನನಗೂ ಜೀವವಿದೆ ಅನ್ನುವದನ್ನು ಮರೆತು

ಹಿಚುಕಿದರು ಗರ್ಭದಲ್ಲೇ ನನ್ನ ಕತ್ತು...//

ಜಗ ನೋಡದ ಹಸುಳೆ ನಾನು

ನನ್ನ ಕೊಂದರೆ ನಿಮಗೆ ಲಾಭವೇನು?

ನನ್ನಲ್ಲೂ ನೂರೆಂಟು ಬದುಕುವ ಹಂಬಲ..

ಆದರೆ ನಿಮ್ಮಿಂದ ನನಗೆ ದೊರೆಯಲೇ ಇಲ್ಲ ಆ ಕಾಲ//

ಹಸಿ ಮೈಯ ಹಸುಳೆಯಾದ ನನ್ನನ್ನು ಎಲ್ಲೆಂದರಲ್ಲಿ ಎಸೆದು.

ಹಾದಿ ಬೀದಿಯ ಪ್ರಾ‌ಣಿಗಳಿಗೆ ನನ್ನ ರಕ್ತವ ಬಸೆದು.

ನೀಡಿದ ನಿಮಗೆ ಏನು ಗೊತ್ತು,ನನ್ನಲ್ಲೂ ಒಂದು ಜೀವವಿತ್ತು,ಅನ್ನುವದನ್ನು ಮರೆತು...

 ಹೊಲಸು ತುಂಬಿದ ನಿಮ್ಮ ಮನಸು ಮಾಡಿತ್ತು ಮಸಲತ್ತು//

ದೇಹದ ಖುಷಿಗೆ ಮೈ ಮನ ಮಾರಿದರೆ ಏನು ಸಿಗುವುದು ನಿಮಗೆಲ್ಲ??

ನನ್ನ ಕೊಲೆ ಮಾಡಿದ ನಿಮಗೆ ಏನು ಸಿಕ್ಕಿತೋ ಗೊತ್ತಿಲ್ಲ,,

ನನ್ನ ಕಥೆ ಮುಗಿಯಿತು ಇನ್ನಾದರು ನಿಲ್ಲಿಸಿ ನೀಚ ಕೃತ್ಯ..

ಮುಂದುವರೆಸಿದರೆ ನನ್ನ ಶಾಪ ತಟ್ಟದೆ ಇರುವುದಿಲ್ಲ ಅನ್ನುವುದಂತು ಸತ್ಯ...//


Rate this content
Log in

Similar kannada poem from Classics