STORYMIRROR

Sonu Imambhai

Abstract Tragedy Inspirational

3  

Sonu Imambhai

Abstract Tragedy Inspirational

ಬಾಡಿಗೆ ಮನೆಯ ಬದುಕು

ಬಾಡಿಗೆ ಮನೆಯ ಬದುಕು

1 min
154

ಬದುಕೊಂದು ಬಾಡಿಗೆ ಮನೆ,

ಮೇಲಿರುವುದು ಸ್ವಂತ ಮನೆ...

ಬಾಡಿಗೆಯ ಬದುಕು ಮುಗಿದ ಮೇಲೆ...

ಉಳಿಯಬೇಕು ಸ್ವಂತ ಮನೆಯಲ್ಲೇ!!

ಒಂದು ನೆಮ್ಮದಿಯ ಮನೆ,ಇನ್ನೊಂದು ನರಕದ ಮನೆ..

ಮಾಡಿದ ಕಾರ್ಯಗಳು ಕೊಡುವ ಜವಾಬಿನ ಮೇಲೆ

ನಿರ್ದಾರವಾಗುವವು ನಮ್ಮ ನಮ್ಮ ಮನೆ..

ಮತ್ತೊಬ್ಬರನ್ನು ಕೀಳಾಗಿ ಕಂಡ ದೌಲತ್ತು..

ಮಣ್ಣಲ್ಲಿ ಮಣ್ಣಾಗಿ ಹೋಗುವಾಗ ಆಗಲಿಲ್ಲ ಸ್ವತ್ತು...!!

ಮತ್ತೊಬ್ಬರಿಗೆ ಆಜ್ಞೆ ಮಾಡಿದ ಕೈಗಳಿಂದು ಸುಮ್ಮನೆ ಮಲಗಿವೆ..

ತೋರಿದ ದರ್ಪಗಳು ದೇಹದೊಂದಿಗೆ ಸತ್ತು ಹೋಗಿವೆ..

ಬದುಕಿನುದ್ದಕ್ಕೂ ಬ್ರ್ಯಾಂಡು ಬ್ರ್ಯಾಂಡು..

ಸತ್ತಾಗ ಸುತ್ತಿದ ಕಫನ್‌ಗೆ ಯಾವ ಬ್ರ್ಯಾಂಡು!??

ಬದುಕಿದ್ದಾಗ ಏನನ್ನು ನೀಡಲಿಲ್ಲ ದಾನವಾಗಿ

ಮತ್ತೊಬ್ಬರನ್ನು ಹೊಡೆದು ತಿಂದಿದ್ದೆ ಹೆಚ್ಚಾಗಿ...

ನಾನು ನನ್ನದು ಎನ್ನುವ ಜನರು ಕೊನೆಗೆ ಏನು ಒಯ್ಯಲಿಲ್ಲ

ಗಳಿಸಿಟ್ಟ ದುಡ್ಡು ಶರೀರದೊಂದಿಗೆ ಸಾಯಲಿಲ್ಲ!!


Rate this content
Log in

Similar kannada poem from Abstract