STORYMIRROR

Sonu Imambhai

Abstract Tragedy Inspirational

3  

Sonu Imambhai

Abstract Tragedy Inspirational

ಕುಲ-ಜಾತಿ

ಕುಲ-ಜಾತಿ

1 min
138


ಕುಲ ಕುಲವೆಂದರು,ಕುಲ ಜಾತಿಯೆಂದು ಜೀವತೆತ್ತವರು ನೂರಾರು...

ಬಿದ್ದಾಗ ಎತ್ತುವರು,ಅತ್ತಾಗ ಕಣ್ಣೊರೆಸಿದವರು ನಮ್ಮವರು...

ಜಾತಿಯ ಮದ ತುಂಬಿಕೊಂಡು ಕೆಸರಲ್ಲಿನ ಎಮ್ಮೆಯಂತಿರುವರು...

ಅಲ್ಲಲ್ಲಿ ಕುಲ ಜಾತಿ ಎಂಬ ದ್ವೇಷವ ಬಿತ್ತುತಿರುವರು//

ನಾನು ಹಿಂದು,ನೀನು‌ ಮುಸಲ್ಮಾನ,ಅವನು ಕ್ರೈಸ್ತ,

ಎಂತೆಲ್ಲ ಹೇಳಿ ಏಕೆ ಕೆಡಿಸುವಿರಿ ಸಮಾಜದ ಸ್ವಾಸ್ಥ್ಯ??

ಇರುವಾಗ ನಾವು ಮಣ್ಣಿನ ಮೇಲೆ,ಸತ್ತಾಗ ಮಣ್ಣು ನಮ್ಮ ಮೇಲೆ!!

ಇಷ್ಟೇ ನಮ್ಮ ಪಯಣ,ಗಳಿಸು ನಾಲ್ಕು ಜನಗಳ ಪ್ರೀತಿ ವಿಶ್ವಾಸವನ್ನ..

ಸತ್ತಾಗ ಬೇಕಾಗುವರು ಹೊರಲು ನಿನ್ನ ಹೆಣವನ್ನ!!

ಅಲ್ಲಲ್ಲಿ ಜಗಳಗಳ ಕಿಡಿಯ ಹಚ್ಚಿ,

ಗೊತ್ತಿಲ್ಲದಂತೆ ಏಕೆ‌ ನಿಲ್ಲುವೆ ಕಣ್ಣು ಮುಚ್ಚಿ??

ಮಾಡುವುದೆಲ್ಲವ ಮಾಡಿ,ನಿಲ್ಲದಿರು ಗೊತ್ತಿಲ್ಲದವನಂತೆ...

ಜಾತಿಯೆಂಬ ಚೌಕಟ್ಟಿನಲ್ಲಿ ಬದುಕಿದ್ದು ನೀನಾಗಿರುವೆ ಹೆಣದಂತೆ!!

ಅದ್ಭುತ ಪ್ರಪಂಚವ ಕಣ್ತೆರೆದು ಒಮ್ಮೆ ನೋಡು...

ಸಾಧ್ಯವಾದರೆ ಪ್ರೀತಿಯ ಬೀಜವ ಬಿತ್ತಿ ನೋಡು!!

ಪ್ರೀತಿ ವಿಶ್ವಾಸಕ್ಕೆ ಇಲ್ಲ ಯಾವುದೇ ಜಾತಿ...

ಅರಿತು ಬಾಳು‌ ಮನುಜ,ಮನದ ಕೊಳೆ ಕಳೆದು ಪಸರಿಸಲಿ ಎಲ್ಲೆಡೆ ಪ್ರೀತಿ!!!


Rate this content
Log in

Similar kannada poem from Abstract