ಭಾವದ ಮಿಡಿತ
ಭಾವದ ಮಿಡಿತ
ಭಾವ ಭಾವಗಳಲೊಂದು ಮಿಡಿತ
ನರನಾಡಿಯಲಿ ನಿನದೇ ತುಡಿತ
ನೀ ಸುಳಿದಾಗ ಜೋರಾಗಿದೆ ಎದೆ ಬಡಿತ
ಹೆಚ್ಚಾಗಿದೆ ನಿನ್ನ ಪ್ರೀತಿಯ ಸೆಳೆತ//
ನೂರೆಂಟು ನೋವಲ್ಲಿ ನೀ ನನಗೆ ಸಿಹಿಯಾದೆ
ಆ ಪ್ರೀತಿಯ ಆಳದಲ್ಲಿ ನಾ ಮರೆಯಾದೆ
ಜಗಕೆಲ್ಲ ಮರೆಯಾದರು,ನಿನ್ನ ಎದೆಗೂಡಲ್ಲಿ ನಾನಿದ್ದೆ
ಹೊರ ಬರಲು ಮನಸಿಲ್ಲದೇ ಸುಮ್ಮನೆ ಸೆರೆಯಾದೆ//
ಕಾರಣವಿಲ್ಲದೆ ಸುಮ್ಮನೆ ನಗುವೇ ನಾನು ಈ ದಿನ
ನನಗೇನಾಗುತಿದೆ ಗೊತ್ತಾಗುತ್ತಿಲ್ಲ ಈ ಕ್ಷಣ
ನೀ ನನ್ನ ಬಳಿ ಇಲ್ಲದಿದ್ದರೂ,ನೀನೇ ನನ್ನ ಜೀವನ
ಹೇ! ಹೃದಯದರಸಿ ತೆಗೆದುಕೊಂಡು ಹೋಗು ನಿನ್ನೆಡೆಗೆ ನನ್ನ ಪ್ರಾಣ!//