STORYMIRROR

Sonu Imambhai

Abstract Romance Tragedy

3  

Sonu Imambhai

Abstract Romance Tragedy

ಸಾವಿನ ಸೂರು

ಸಾವಿನ ಸೂರು

1 min
211

ಸೊಗಸಾದ ಪ್ರೀತಿಯು ಮುನಿಸೆಂಬ ಸಾಗರದಲೆಯ ಅಪ್ಪುಗೆಗೆ

ತುಂಡು ತುಂಡಾಗಿ ತುಣುಕಾಯಿತು...

ಪ್ರೀತಿಯೇ ದೈವವೆಂದ ಜೀವನ ಸಾವಿಗೆ ಕೈಬೀಸಿ ಕರೆಯಿತು...

ಬದುಕಿದ್ದರೆ ಅವಳೊಡನೆ ಎಂಬ ದ್ಯೇಯವು ಸದ್ದಿಲ್ಲದೆ ಸತ್ತು ಹೋಯಿತು...

ಅವಳ ನೆನಪು ಬಿಕ್ಕಳಿಸಿ ಅತ್ತು ತನ್ನ ಕತ್ತು ತಾನೆ ಕತ್ತರಿಸಿಕೊಂಡಿತು...

ಅಸುನೀಗಿದ ಕನಸಿನ ಅಂತ್ಯಸಂಸ್ಕಾರಕ್ಕೆ ಯಾರನ್ನ ಕರೆಯಲಿ...??

ಕರೆದರು ಯಾರು ತಾನೆ ಬರುವರು???

ನೀ ಆಡಿದ ಸವಿನುಡಿ ಕಿವಿಯ ಸುಡುತಿರಲು ಯಾರಿಗೆ ಹೇಳಲಿ...??

ಬಂದರು ಸುಡುತಿರುವ ಆ ಬೆಂಕಿಯ ಪ್ರೀತಿಯ ನೀರುಣಿಸಿ ಆರಿಸುವವರಾರು??

ನೀ ತೋರಿದ ಅಕ್ಕರೆಗೆ ಸಕ್ಕರೆಯ ಸಿಹಿಯು ಸಪ್ಪೆಯಾದಂತೆ!

ಇಂದು ನೀನಿಲ್ಲದ ಸಮಯ,ಸಂತೋಷವೆಲ್ಲವೂ ನೋವಿನ ಸಂತೆಯಂತೆ...

ನನ್ನ ದೂರಿದ ನೀನು‌ ದೂರದಿ ಚೆನ್ನಾಗಿರು..

ನಾ ಬದುಕಿದ್ದರೆ ಮತ್ತೊಮ್ಮೆ ಪ್ರೀತಿಯ ಮಳೆ ಹನಿಯ ನನ್ನ ಮೇಲೆ ಸವರು....

ನನ್ನೊಡಲ ಉರಿಸಿ ನಿನ್ನ ಕನಸ ಕಡಲ ತೀರ ಬೆಳಗಿದೆ..

ನಿನ್ನ ನೋವ ಮರೆಸಲು ನಾನು ಅತ್ತು ನಿನ್ನ ನಗಿಸಿದೆ...

ನೀ ಮಾಡಿದ್ದು ತಪ್ಪಾಗಿದ್ದರೂ,ನೀಡಿರುವೆ ನನ್ನ ಮೇಲೆಯೇ ದೂರು..

ಉಸಿರಿಗೆ ಉಸಿರಾದವಳೇ ಹೀಗೆ ಮಾಡಿದರೆ ಸಾವೇ ನನಗೆ ಸೂರು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract