Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Geethasaraswathi K

Abstract Classics Others

4.4  

Geethasaraswathi K

Abstract Classics Others

ರಾಜಕುವರನ ನೆನಪಿನಲ್ಲಿ

ರಾಜಕುವರನ ನೆನಪಿನಲ್ಲಿ

1 min
465


ನಗುಮೊಗದ 

ಮಗು ಮನದ 

ಮುತ್ತುರಾಜನ ಕುವರ

ಜನಕೋಟಿ

ಹೃದಯ ಸಾಮ್ರಾಜ್ಯದ 

ರಾಜಕುಮಾರ

ಅಭಿಮಾನಿ ದೇವರುಗಳ

ಹೃದಯಮಂದಿರದ

ಆರಾಧ್ಯ ಮೂರ್ತಿ

ಈ ರಾಜಕುಮಾರ

ನಟನೆಗೆ ಸಾರ್ವಭೌಮ 

ನೋವಿಗೆ ಮಿಡಿವಮನ

ಕೊಡುಗೈಯದಾನಿ ಇವನು

ಆನಾಥರ ಆಶಾಕಿರಣ

ಸದ್ಗುಣಗಳ ಖಣಿ

ಕನ್ನಡಿಗರ ಕಣ್ಮಣಿ

ನಮ್ಮ ಈ ರಾಜಕುಮಾರ 

ದೊಡ್ಮನೆಯ ಕುಡಿ

ಸಿನಿಲೋಕದ ಯುವರತ್ನ 

ದಣಿವರಿಯದ ಧಣಿ

ನಮ್ಮ ಪ್ರೀತಿಯ 'ಅಪ್ಪು'

ಈ ರಾಜಕುಮಾರ 

ನೀನಿಲ್ಲದೆ 

ನಿನ್ನ ಸ್ಫೂರ್ತಿ ಇಲ್ಲದೇ

ಮನವಿಂದು ಬರಿದಾಗಿಹುದು 

ನಿನ್ನ ನೆನಪೇ 

ಎಂದೆಂದು ಹಸಿರಾಗಿರಲಿ

ನೀ ಇಟ್ಟ ಹೆಜ್ಜೆ

ನಮಗೆ ದಾರಿದೀಪ ದಾರಿದೀಪವಾಗಲಿ. 



Rate this content
Log in