STORYMIRROR

Surabhi Latha

Abstract Classics Inspirational

4  

Surabhi Latha

Abstract Classics Inspirational

ಅಳುಕು

ಅಳುಕು

1 min
493

ಹೊರಗೆಲ್ಲಾ ಬೆಳಕೇ ಬೆಳಕು

ಮನದಲ್ಲಿ ಸಣ್ಣ ಅಳುಕು

ಮಡು ಗಟ್ಟಿದ ದುಃಖ

ಸಂತಸವೇ ಕಾಣದ ತಿರುಕನಂತೆ


ಕಿರುನಗೆಯಲ್ಲು ಅಸತ್ಯದ ವಾಸನೆ

ತನ್ನೆದೆ ರಾಜ್ಯ ವಾಳಿದ ಜಿಗುಪ್ಸೆ

ಇಷ್ಟೆಯೇ ಜೀವನದ ಸತ್ಯ

ನೋವು ನಲಿವು ಎಲ್ಲಾ ಮಿಥ್ಯ 


ರಕ್ತ ಹಂಚಿ ಕೊಂಡವರಿಲ್ಲಿ ಶೂನ್ಯರು

ಪರರೇ ನಮಗೋಮ್ಮೆ ಪ್ರಿಯರು

ಸಂತಸಕ್ಕೂ ಒಂದು ಕಾರಣ ಸಾಕು 

ನಿರಾಸೆಗೂ ನಿತ್ಯ ಬದುಕಲೇ ಬೇಕು


ಬರೆದಿಟ್ಟ ಬ್ರಹ್ಮನ ಲೆಕ್ಕಾಚಾರ

ನ್ಯಾಯ ಕೇಳಿದವರಿಗೆ ಗ್ರಹಚಾರ

ನಿನ್ನಷ್ಟು ಸಹನೆ ಮನುಜರಿಗಿಲ್ಲ

ಎಲ್ಲವನು ದೇವನೇ ಬಲ್ಲ



Rate this content
Log in

Similar kannada poem from Abstract