STORYMIRROR

Ramesh gundmi

Abstract Classics Others

4  

Ramesh gundmi

Abstract Classics Others

ಹಸಿರೇ ನಮ್ಮುಸಿರು

ಹಸಿರೇ ನಮ್ಮುಸಿರು

1 min
269

ಹಸಿರೆ ನಿನ್ನುಸಿರು ಮನು ಕಂದ,

ಹಸಿರಾಗಿ ಮೆರೆಸೋ

ಈ ನಿನ್ನ ಧರೆ ತಾಯ,

ದೊರೆ ಹಂಗ ನಿನ್ನ ಸಲುಹೇನ,

ದೊರೆ ಹಂಗ ನಿನ್ನ ಸಲುಹೇನು

ಮನು ಕಂದ

ಈ ಜಗಕೆ ದೊರೆಯ ಮಾಡೇನು.

ಹಸಿರೆ ಈ ಜಗದ ಉಸಿರದು ಕಾಣ

ಹಸಿರಿಲ್ಲವೆಂದರೆ

ಧರೆ ಹತ್ತಿ ಉರಿದೀತೋ

ಇರಲೆಲ್ಲಿ ಹುಡುಕುವೆ ತಾವನ್ನು

ಇರಲೆಲ್ಲಿ ಹುಡುಕುವೆ ತಾವನ್ನು

ಮನು ಕಂದ

ಈಗಲೇ ಜತನಿಸು ಈ ನಿನ್ನ ಭೂತಾಯ

ನಿನ್ನುಸಿರು ನಾನಾಗೇ

ಹಸಿರಾಗಿಸು ನನ್ನನ್ನು.

ಹಸಿರಾದ ಭೂದೇವಿ

ಸುರಿಸ್ಯಾಳು ಖುಷಿ ಮಳೆಯ

ಬೆಳೆದುಂಡು ಬದುಕು ಜಗದಲ್ಲಿ

ಬೆಳೆದುಂಡು ಬದುಕು ಜಗದಲ್ಲಿ

ಮನು ಕಂದ

ಹಸಿರಿದ್ದರೆ ಉಸಿರುಂಟು

ಹಸಿವ ನೀಗಲುಂಟು.

ಕುಡಿಯಲು ನೀರುಂಟು.



Rate this content
Log in

Similar kannada poem from Abstract