STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ತಾರಾ ಲೋಕ

ತಾರಾ ಲೋಕ

1 min
548

ಬಾನಂಗಳದಲಿ

ನೀಲಿಪಟಗಳಲಿ

ಚುಕ್ಕಿ ರಂಗೋಲೆ

ಅಶ್ವಿನಿ ಭರಣಿಗಳ

ನಕ್ಷತ್ರ ಪುಂಜಗಳಾ

ಚಿತ್ರ ಚಿತ್ತಾರಗಳು

ತಾರಾಲೋಕದೊಳು

ಮಿಂಚಿನ ಹೊಳಪಗಳು

ಮಿರು ಮಿರುಗು ತಾರೆಗಳು

ಚಿತ್ತಾ ಸ್ವಾತಿ ವಿಶಾಖಗಳು

ಮಳೆಗರೆವ ಮುತ್ತುಗಳು

ಅನ್ನದಾತನ ಭರವಸೆಗಳು

ತಿಂಗಳನ ಅಂಗಳದೊಳು

ಹೊಳೆ ಹೊಳೆವ ಕುಡಿಗಳು

ಸಹಸ್ರ ಸಹಸ್ರ ನಕ್ಷತ್ರಗಳು

ಧ್ರುವತಾರೆಯರ ತಾಣ

ಚಂದಿರನ ಉಡುಗಣ

ನಕ್ಷತ್ರಲೋಕದಾವರಣ



இந்த உள்ளடக்கத்தை மதிப்பிடவும்
உள்நுழை

Similar kannada poem from Abstract