ಸರಳ ರೇಖೆ...!!!!
ಸರಳ ರೇಖೆ...!!!!
ಮಿತ್ರಾ, ನಾನೊಂದು ಸರಳ ರೇಖೆ
ಅದಕಿಲ್ಲ ತುದಿ ಮೊದಲ ಆಯ್ಕೆ
ವೃತ್ತಾಕಾರದಲಿ ಸುತ್ತುವಿಯೇಕೆ
ಅವಲತ್ತುಕೊಂಡು ತಿರುಗಲೇಕೆ
ನನ್ನ ಸರಳತೆಗೆ ಸರಳಾಗಿ ಕಾಯ್ದು
ನೆಚ್ಚಿನ ನುಡಿಗಳ ಆಡಿಪಾಡುತಲಿದ್ದು
ನಗಿಸಿ ಹಿಗ್ಗುವ ನಿನ್ನ ನಾ ಕಂಡಂದು
ಅರಿತೆ ನೀನೂ ಒಬ್ಬ ಅಲೆಮಾರಿಯೆಂದು
ಅಲ್ಲೊಂದು ದೀಪ, ಮಿಣುಕುವ ಬೆಳಕು
ಇಲ್ಲೊಂದು ಜೀವ , ಆಶೆಯ ಹೊಂಬೆಳಕು
ಮನದ ಮೂಲೆಯಲಿ ಮೂಡುವ ಅಳುಕು
ಮಿತ್ರಾ, ನಿನಗರ್ಥವಾಗದ ಆಳದ ಬದುಕು
ಜೊತೆಯಲ್ಲಾಡಿ ಕಳೆದ ಬಾಲ್ಯದ ನೆನಪು
ಮತ್ತೆ ಕಾಡಿದ ಯವ್ವನದ ಹೊಸ ಹುರುಪು
ನಿತ್ಯ ಕಾಡುವ ಹಸೀ ಹಸೀ ಕನಸ ಛಾಪು
ಬತ್ತಿ ಹೋದ ಬಿಸಿ ಭಾವಕೆ ನಿನದೇ ಕಾಪು
(ಬದುಕಿನ ಸುತ್ತ ಸರಳು ನೆಟ್ಟಿರವೆ.
ಆಡಂಬರದ ಗೂಳಿ ನುಗ್ಗದಿರಲೆಂದು...)

