STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Drama Crime

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Drama Crime

ಚಿಂತನೆಯ ನಂಬಿಕೆಯಲಿ.....

ಚಿಂತನೆಯ ನಂಬಿಕೆಯಲಿ.....

1 min
263


 ಭಾರತ ಬಹುಭಾಷಾ ರಾಷ್ಟ್ರವಿದು 

ಹಲವು ಧರ್ಮಗಳ ಸುಂದರ ವೈಶಿಷ್ಟವಿದು

ಭಾವ್ಯಕೈತೆಯ ಸಹೋದರತ್ವದ ನೆಲವಿದು


ಚರಿತ್ರೆ ಸೃಷ್ಟಿಸಿದ ಭಾರತ ಪುಣ್ಯ ಭೂಮಿಯಿದು

ಜ್ಞಾನಿ,ದಾಸರುಸಂತರು,ಶರಣರಿದ್ದ ಜಗವಿದು

ಸತ್ಯ ವಾಕ್ಯಗಳ ಆಡಿದ ಸತ್ಪುರಷರ ತಾಣವಿದು


ಧರ್ಮಗಳು ಇರುವುದು ನಂಬಿಕೆಗಳ ಆಧಾರ

ಮೂಢನಂಬಿಕೆ ಮೇಲೆ ಪ್ರಾಣಿ ಬಲಿ ದುರ್ಧರ ಮನುಜ ಇನ್ನಾದರೂ ತಗೋ ಸರಿ ನಿರ್ಧಾರ


ದೇವರ ಪೂಜೆ,ಅಭೀಷೆಕ ಮೂಢ ನಂಬಿಕೆಯಾದರೆ

ಮೊದಲು ನಮ್ಮ ಐಷಾರಾಮಿಗಳ ತ್ಯಾಗಿಸಬೇಕು

ದೀನರ ಉದ್ದಾರಕ್ಜಾಗಿ ಜೀವ ತುಡಿಯಬೇಕು


ನಂಬಿಕೆ ಹೆಸರಲಿ ತೊಲಗಲಿ ಅನಾಚಾರ

ದೇವರ ಹೆಸರಲಿ ಮಾಡದಿರಿ ಸುಲಿಗೆ ಅತ್ಯಾಚಾರ

ಎಲ್ಲದರಲ್ಲಿ ಇರಲಿ ಸತ್ಯ ವಾಸ್ತವ ವಿಚಾರ


ಜೀವನ ನಂಬಿಕೆಯೇ ಮೂಲಾಧಾರ

ನಂಬಿ ನಡೆದರೆ ಜೀವನ ಸುಖ ಸಂಸಾರ

ಅಪನಂಬಿಕೆಯಲಿ ಹೋರಟರೆ ನಿಸ್ಸಾರ


ಕುರುಡು ನಂಬಿಕೆ ಇರದೆ ವಿಮರ್ಷೆವಿರಲಿ

ಜ್ಞಾನ ,ವಿಮರ್ಷೆ ಬುನಾದಿ ಚಿಂತನೆಯಲ್ಲಿರಲಿ

ನಂಬಿಕೆ ಶ್ರದ್ಧೆ ಬೆರೆತರೆ ಯಶಸ್ಸು ತಿಳಿದಿರಲಿ


ನಂಬಿದರೆ ಬವಣೆ ಬೆಣ್ಣೆಯಂತೆ ಕರಗುವದು

ನಂಬಿಕೆ ಕೆಲಸ ಕೂಡಿದರೆ ಸರಳವಾಗುವದು

ನಂಬದೇ ಹೋದರೆ ಜೀವನ ಕಠಿಣವಾಗುವದು.


Rate this content
Log in

Similar kannada poem from Drama