STORYMIRROR

Siri M P

Abstract Drama Inspirational

4  

Siri M P

Abstract Drama Inspirational

ನನ್ನ ದೇವರು ಅಮ್ಮ

ನನ್ನ ದೇವರು ಅಮ್ಮ

1 min
615

ಆಹಾ! ನೋಡಬನ್ನಿ,

ದಿನವಿಡೀ ದಣಿದು, ದುಡಿದು

ಮಗುವಿಗೆಂದು ಸದಾ ಕಷ್ಟ ಪಡುವ 

ತಾಯಿಯನ್ನ.

ಹೇಗಾದರೂ ಆಗಲಿ, ಸದಾ 

ಮಗುವಿನ ಸುರಕ್ಷಾಥೆಗೆ ಹೊರಾಡುವ ತಾಯಿಯನ್ನ!


ಆಹಾ! ನೋಡಬನ್ನಿ,

ತಾಯಿ ಅಂತಹಾ ರಕ್ಷಾಕವಚವನ್ನ.

ಸದಾ ಮಗುವಿನ ಬೆಳವನಿಗೆ ಮತ್ತು 

ಏಳಿಗೆಗೆ ಸಹಾಯ ಮಾಡುವ ತಾಯಿಯನ್ನ! 


ಆಹಾ! ನೋಡಬನ್ನಿ,

ಒಂದು ಚೂರು ಕಡಿಮೆ ಆಗದ

ಈ ಪ್ರೀತಿ, ಮಮತೆ ಹಾಗು ವಾತ್ಸಲ್ಯ ಧಾರೆಯನ್ನ.

ಹಾಗೆ ತನ್ನ ಮಗುವಿನ ಓದು, ವಿದ್ಯೆ, ಬರಹ, 

ಉದ್ಯೋಗ, ಜೀವನ ನಿರ್ವಹಣೆಗಳಲ್ಲಿ ಸದಾ 

ಭಾಗಿ ಆಗಿರುವ ತಾಯಿಯನ್ನ! 


ಆಹಾ! ನೋಡಬನ್ನಿ,

ಮಗುವಿನ ಸೋಲನ್ನು ಒಪ್ಪದ,

ಮಗುವಿನೊಂದಿಗೆ ಗಟ್ಟಿಯಾಗಿ ನಿಲ್ಲುವ ತಾಯಿಯನ್ನ.

ಹಾಗು, ಮಗು ಎಂಥಹ ತಪ್ಪು ಮಾಡಿದರೂ,

ಕ್ಷಮಿಸಿ ಬಿಡುವ ಈ ಕಾರುಣ್ಯ ದೇವತೆಯನ್ನ!


ಆಹಾ! ನೋಡಬನ್ನಿ,

ತಾಯಿ ಮಗುವಿನ ಈ

ಮಧುರ ಬಾಂಧವ್ಯವ!

ಹಾಗೆಯೆ, ಒಂದು ಅಧ್ಬುತವಾದ, ಎಂದಿಗೂ

ನಿರ್ಲಕ್ಷ್ಯ ತೋರದೆ ಇರುವ 

ಈ ತಾಯಿ-ಮಗುವೆಂಬ ಬಾಂಧವ್ಯವ!


 


Rate this content
Log in

Similar kannada poem from Abstract