STORYMIRROR

ಹೃದಯ ಸ್ಪರ್ಶಿ

Drama Classics Others

4  

ಹೃದಯ ಸ್ಪರ್ಶಿ

Drama Classics Others

ಗೆಳತಿಗಾಗಿ

ಗೆಳತಿಗಾಗಿ

1 min
419

ಮೆಲ್ಲ ಮೆಲ್ಲನೇ ಬೀಸುವ ತಂಗಾಳಿಯೇ

ನನ್ನ ಗೆಳತಿಯ ಬಳಿಯಲ್ಲೊಮ್ಮೆ ಸುಳಿದು ಬಾ

ಮನದ ನೋವಿನ ಜ್ವಾಲೆಗೆ ತಂಪನ್ನೀಯುವಂತೆ


ಭುವಿಯ ಸವಿಯ ಹೆಚ್ಚಿಸುವ

ಮುದ್ದು ಮುದ್ದು ಹೂವುಗಳೇ..

ಅವಳ ಮನದ ಬೇಸರ ಕಳೆದು

ಮತ್ತಷ್ಟು ಮುದ ನೀಡ ಬನ್ನಿ..

ನನ್ನ ಇರುವಿಕೆಯನ್ನು ಸ್ಪಷ್ಟಪಡಿಸುವಂತೆ


ಬದುಕಿನ ಆಸೆಯನ್ನು ಹೊರಹೊಮ್ಮಿಸುವ

ಸುಂದರ ಕವನಗಳೇ..

ಒಂದೇ ಒಂದು ಸಾರಿ ಇವಳ

ಮೃದು ಹೃದಯದೊಳಿಳಿದು ಬನ್ನಿ..

ಈ ಮುದ್ದು ಹುಡುಗಿಯ ಮನ

ಹೂವಾಗಿ ಅರಳಿ ತುಸು ನಗು ಬೀರುವಂತೆ


ರಾತ್ರಿ ಮಿನುಗುವ ಚಂದಮಾಮನೇ

ಅವಳ ಕನಸಲ್ಲಿ ನನಸಾಗಿ ಬಾ..

ಆ ಹೊಳಪು ಕಂಗಳಲ್ಲಿ ಇಳಿಯುತ್ತಿರುವ

ಕಣ್ಣೀರೂ ಮಾಯವಾಗುವಂತೆ


ಓ ನಕ್ಷತ್ರಗಳೇ ನೀವೇಕೆ ಸರಿದಿರಿ ಅವಳಿಂದ ದೂರ

ಸುಮ್ಮನಿಳಿದು ಬಂದಿವಳ ಜೊತೆ

ಜೊತೆಯಾಗಿ ಆಟ ಆಡ ಬನ್ನಿ..

ಅವಳ ಒಂಟಿತನದ ಕೊರಗು ಬಿಟ್ಟು

ಹಾಯಾಗಿರುವಂತೆ... 



Rate this content
Log in

Similar kannada poem from Drama