STORYMIRROR

Vaishnavi S Rao

Drama Tragedy Others

4  

Vaishnavi S Rao

Drama Tragedy Others

ಶೂನ್ಯ

ಶೂನ್ಯ

1 min
471

ಪಂಜರದ ಪಕ್ಷಿಗೆ ಜೀವ ಕೊಟ್ಟೇನು ನಾನು

ಮನದ ನೋವನ್ನು ನಾನೇ ಕೇಳಿದೆ ನಾನು

ಕಷ್ಟ ದುಃಖವನ್ನು ಹಂಚಿಕೊಳ್ಳಲು ನಾನು

ಕೇಳಲು ಹೋಗಿ ಒಬ್ಬಂಟಿಯಾದೆ ನಾನು


ಮುಖದಲ್ಲಿ ನಗು ಬೇಕು ನಾನು ಬಯಸಿದೆ

ಬದುಕು ಕಳೆದುಕೊಂಡು ಎಲ್ಲಾ ಶೂನ್ಯವಾಗಿದೆ

ಕಷ್ಟಕ್ಕೆ ಹೆಗಲು ಕೊಡಲು ಯಾರು ಇಲ್ಲವಾಗಿದೆ

ಜೀವ ಕೊಡುವಾಗಲು ಹಳೆಯ ಘಟನೆ ಎನಿಸಿದೆ


ಪಕ್ಷಿಯಂತೆ ನನ್ನಯ ಬದುಕುಗಳು ಆಯಿತು

ಕತ್ತಲ ಕೋಣೆಯಲ್ಲೇ ನನ್ನ ಅಂತ್ಯವಾಯಿತು

ಜೀವಕೊಟ್ಟಾಗ ಪಕ್ಷಿಯ ಮನಗಳು ಕರಗಿತು

ಆದರೆ ಕುಟುಂಬ ಇಲ್ಲದ ಮನ ಹಂಬಲಿಸಿತು 


ಅಂದು ಎಲ್ಲಾ ಜೊತೆಯಲ್ಲಿ ನಲಿಯುತ್ತಿದ್ದೆನು

ಒಂದೇ ಜೀವ ಒಂದೇ ಹೃದಯ ಹೇಳುತ್ತಿದ್ದೆನು

ಅಮ್ಮನ ಮಡಿಲಿನಲ್ಲಿ ಮರಿಯಾಗಿ ಬಂದೆನು

ಮಾನವನ ಕಣ್ಣು ನಮ್ಮಯ ಮೇಲೆ ಹರಿಸಿದೆನು


ಹಾಳು ಆಸೆಗಾಗಿ ಕುಟುಂಬ ನಶಿಸಿಹೋಯಿತು

ಇನ್ನೂ ನನ್ನ ಜೀವ ಮಾತ್ರ ಉಳಿದು ಹೋಯಿತು

ಈ ಚರಿತ್ರೆ ಕೇಳಿ ಎಲ್ಲಾ ಕಣ್ಣಿನಲ್ಲಿ ನೀರು ತುಂಬಿತು

ಮರಳಿ ಜೀವ ಮರಳಿ ಪಡೆಯುವ ಆಸೆ ಕೊನೆಯಿತು 



Rate this content
Log in

Similar kannada poem from Drama