STORYMIRROR

ಹೃದಯ ಸ್ಪರ್ಶಿ

Abstract Drama Others

4  

ಹೃದಯ ಸ್ಪರ್ಶಿ

Abstract Drama Others

ಏನೆಂದು ಹೆಸರಿಡಲಿ..?

ಏನೆಂದು ಹೆಸರಿಡಲಿ..?

1 min
542

ಏನೆಂದು ಹೆಸರಿಡಲಿ ಈ ಕಥೆಗೆ

ಹೊಸ ಕಥೆಯ ಮೊದಲ ಸಾಲಿನಲೂ

ನಿನ್ನದೇ ನೆನಪುಗಳಿರುವಾಗ.


ಕಡಲಿನ ಹಸಿ ಮರಳ ಮೇಲೆ

ಕಟ್ಟಿದ ಮನೆ ಕುಸಿದ ಕಥೆ ಹೇಳಲೇ..?

ಅಪ್ಪಳಿಸಿ ಬರುವ ಅಲೆ ಕೈಗೆ

ಸಿಗದೆ ಬಿಟ್ಟು ಹೋದ ಕಥೆ ಬರೆಯಲೇ.?


ಜೋಡಿಸಿ ನಲಿದ ಹೂ ಕನಸುಗಳ ಗೋಪುರ

ನುಚ್ಚು ನೂರಾದ ಕಥೆಯ ಹೆಣೆಯಲೇ..?

ನಾನೊಮ್ಮೆ ಅತ್ತಾಗ ನೀ ನಕ್ಕು ನಗಿಸಿದ

ಕಥೆಯ ನೆನಪಿಸಲ?


ಏನೆಂದು ಆರಂಭಿಸಲಿ ಈ ಕಥೆಯ.?

ಏನೆಂದು ಹೆಸರಿಡಲಿ ಈ ಕಥೆಗೆ..?

ನಿನ್ನ ಕಥೆಗೆ ನೀನೇ ಹೆಸರು ನೀಡಿ ಹೋಗು

ಹೋಗುವ ಮುನ್ನ ನನ್ನ ನೆನಪುಗಳ

ಮರಳಿಸಿ ಹೋಗು.


ಮುಗ್ಧ ಹೃದಯದಲಿ ಜನಿಸಿದ ಪ್ರೀತಿ

ಬಾಡಿ ಹೋದ ಕಥೆ ಬರೆಯಲು ಕೆಲವು

ಪದಗಳನಾದರೂ ಬಿಟ್ಟು ಹೋಗು.

ನಿನ್ನ ಕಥೆಗೆ ನೀನೇ ಹೆಸರಿಟ್ಟು ಹೋಗು.



Rate this content
Log in

Similar kannada poem from Abstract